ಪ್ರಿಯಕರನಿಗಾಗಿ ಪಾಕ್‌ಗೆ ತೆರಳಿದ ೨ಮಕ್ಕಳ ತಾಯಿ

ನವದೆಹಲಿ,ಜು.೨೪-ಇದು ಫೇಸ್ ಬುಕ್ ಪ್ರಣಯಕ್ಕೆ.ಫೇಸ್ ಬುಕ್ ನಲ್ಲಿ ಪರಿಚಯವಾದ ೩೪ ವರ್ಷದ ೨ ಮಕ್ಕಳ ತಾಯಿ ಅಂಜು ಮತ್ತು ನಸ್ರುಲ್ಲಾ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಮದುವೆಯ ಹಂತ ತಲುಪಿದ್ದಾರೆ. ಅಷ್ಟೇ ಅಲ್ಲ, ಅಂಜು ತನ್ನ ಗೆಳೆಯ ನಸ್ರುಲ್ಲಾಗಾಗಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ ,ಈ ಪ್ರೀತಿಗೂ ಪಬ್ಜಿ ಮೂಲಕ ಪರಿಚಯವಾದ ಪ್ರಿಯಕರನ ಭೇಟಿಗೆ ಸೀಮಾ ಹೈದರ್ ಭಾರತಕ್ಕೆ ಬಂದ ಘಟನೆಗೂ ಸಾಮ್ಯತೆ ಇದೆ, ಆದರೆ ಸೀಮಾ ಹೈದರ್ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರೆ, ಅಂಜು ವೀಸಾ ಪಡೆದು ಎಲ್ಲಾ ದಾಖಲೆಗಳನ್ನು ನೀಡಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ.
ಪಬ್‌ಜಿ ಮೂಲಕ ಪರಿಚಯವಾದ ಗೆಳೆಯನನ್ನು ಸೇರಲು ಪತಿಯನ್ನು ಬಿಟ್ಟು, ತನ್ನ ಮಕ್ಕಳೊಂದಿಗೆ ಪಾಕಿಸ್ತಾನದ ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿಸಿದ ಘಟನೆ ಭಾರೀ ಕುತೂಹಲ ಕೆರಳಿಸಿದ್ದ ಘಟನೆ. ಇದೀಗ ಇದೇ ರೀತಿಯ ಆದರೆ ಅದರ ತದ್ವಿರುದ್ಧ
ಘಟನೆ ನಡೆದಿದೆ. ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪರಿಚಯ ಪ್ರಣಯಕ್ಕೆ ತಿರುಗಿ ಇದೀಗ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು ಭಾರಿ ಕೋಲಾಹಲ ಸೃಷ್ಟಿಸಿದ್ದಾಳೆ.
ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿದ್ದ ಅಂಜು ತನ್ನ ಗಂಡ ಅರವಿಂದ್ ಜೊತೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಳು.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನಿವಾಸಿ ನಸ್ರುಲ್ಲಾ ಮತ್ತು ಭಾರತದ ಅಂಜು ಫೇಸ್‌ಬುಕ್ ಮೂಲಕ ಭೇಟಿಯಾದರು. ಕೆಲ ದಿನಗಳ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿದೆ. ನಸ್ರುಲ್ಲಾ ಪಾಕಿಸ್ತಾನಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾನೆ.ಎರಡು ದೇಶಗಳ ನಡುವಿನ ಅಂತರ ಮತ್ತು ಸಂಬಂಧದ ಬಗ್ಗೆ ತಲೆಕೆಡಿಸಿಕೊಳ್ಳದ ಅಂಜು, ತನ್ನ ಇನಿಯನಿಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದ್ದಾರೆ.
ಅಂಜು ಬದುಕಿದ್ದರೆ ನಸ್ರುಲ್ಲಾ ಜೊತೆ ಮಾತ್ರ ಬದುಕುತ್ತೇನೆ ಎಂದು ನಿರ್ಧರಿಸಿ, ನೇರವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಜೂನ್ ೨೧ ರಂದು ಪಾಕಿಸ್ತಾನಕ್ಕೆ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದಳು. ವೀಸಾ ಕೈಗೆ ಸಿಕ್ಕ ತಕ್ಷಣ ಅಂಜು ಪಾಕಿಸ್ತಾನಕ್ಕೆ ತೆರಳಿದ್ದಾಳೆ.
ಎಲ್ಲಾ ದಾಖಲೆಗಳೊಂದಿಗೆ ಪಾಕಿಸ್ತಾನಕ್ಕೆ ತೆರಳಿದ ಅಂಜು ಅವರನ್ನು ಭದ್ರತಾ ಅಧಿಕಾರಿಗಳು ಹಲವು ಬಾರಿ ವಿಚಾರಣೆ ನಡೆಸಿದ್ದರು. ಸದ್ಯ ನಸ್ರುಲ್ಲಾನನ್ನು ಭೇಟಿಯಾಗಿರುವ ಅಂಜು ಮದುವೆಯಾಗಲು ನಿರ್ಧರಿಸಿದ್ದಾಳೆ. ಆದರೆ ಕೆಲವು ಸುತ್ತಿನ ವಿಚಾರಣೆ ಬಾಕಿಯಿರುವುದರಿಂದ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.