ಪ್ರಿಪರೇಷನ್ ಆಫ್ ಪ್ರೊಜೆಕ್ಟ್-ವಿಶೇಷ ಉಪನ್ಯಾಸ

ಕಲಬುರಗಿ,ಸೆ.23=ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಷದ ಅಡಿಯಲ್ಲಿ (ಐ.ಕ್ಯೂ.ಎ.ಸಿ) ಅರ್ಥಶಾಸ್ತ್ರ ವಿಭಾಗದಿಂದ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥÀ ಪ್ರೊ. ಬಸವರಾಜ ಕೊಂಬಿನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನ ಚರ್ಚೆ ಮಡುವ ಹವ್ಯಾಸ ಇರಬೇಕು. ಈ ರೀತಿಯ ವಿಶೇಷ ಉಪನ್ಯಾಸದಲ್ಲಿ ಇವುಗಳಿಗೆ ಅವಕಾಶ ಇರುತ್ತದೆ. ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಂಶೋಧನಾ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ವಿಶೇಷó ಉಪನ್ಯಾಸಕರಾಗಿ ಆಗಮಿಸಿದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋದನಾ ಮಾರ್ಗದರ್ಶಕರಾದ ಡಾ.ರಮೇಶ ಪೋತೆ ಅವರು, ಪ್ರಿಪರೇಷನ ಆಫ್ ಪ್ರೊಜೇಕ್ಟÀ ವಿಷಯದ ಮೇಲೆ ಪಿ.ಪಿ.ಟಿ. ಮೂಲಕ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಸಂಶೋಧನೆಯಲ್ಲಿ ಬರುವ ಸಂಶಯಗಳನ್ನು ತಿಳಿಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೈಕಿಷನ ಠಾಕೂರ ವಹಿಸಿದ್ದರು. ವೇದಿಕೆಯ ಮೇಲೆ ಪ್ರೊ.ಅಣ್ಣಾರಾಯ ಪಾಟೀಲ, ಪ್ರೊ. ಶಂಕರ ಗಣಗೊಂಡ, ಡಾ. ಶಿಲ್ಪಾ ಗಾಂವಕರ ಉಪಸ್ಥಿತಿ ಇದ್ದರು. ಕಾಲೇಜಿನ ಸಿಬ್ಬಂದಿಗಳಾದ ಪ್ರೊ.ಸತ್ತೇಶ್ವರ ಚೌದುರೆ, ಪ್ರೊ. ರೇಣುಕಾಬಾಯಿ, ಡಾ. ವಿಠಲ ಮುಕರಂಭ, ಪ್ರೊ. ವಾರದ, ಪ್ರೊ.ಸುಜಾತಾ ದೊಡಮನಿ, ಪ್ರೊ. ಭಾರ್ಗವಿ ಎಚ್. ಪ್ರೊ. ಶಿವಕುಮಾರ, ಡಾ. ಶಾತಮ್ಮ, ಪ್ರೊ. ಅರುಣಕುಮಾರ ಮತ್ತು ಸ್ನಾತಕ, ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.
ಡಾ. ಚಂದ್ರಕಾಂತ ಸಿಂಘೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಪ್ರೊ. ಅರುಣಕುಮಾರ ಅತಿಥಿ ಪರಿಚಯಿಸಿದರು, ವಿದ್ಯಾರ್ಥಿ ಅರುಣಕುಮಾರ ವಂಧಿಸಿದರು, ಈ ಕಾರ್ಯಕ್ರಮವು ವಿದ್ಯಾರ್ಥಿನಿ ನಾಗಮ್ಮ ನಿರೂಪಿಸಿದರು.