ಪ್ರಾ. ಶಾ.ಶಿ.ಸಂಘ: ರಾಜ್ಯಾಧ್ಯಕ್ಷರಿಗೆ ಸನ್ಮಾನ ಸಮಾರಂಭ

ಲಿಂಗಸುಗೂರು.ಜ.೦೬-ವರ್ಗಾವಣೆ, ಪದೋನ್ನತಿ ಸೇರಿ ಶಿಕ್ಷಕರ ಹತ್ತಾರು ಸಮಸ್ಯೆಗಳ ಬಗ್ಗೆ ಸಂಘ ಯಾವತ್ತೂ ಬೆನ್ನಿಗೆ ನಿಂತು ಕೆಲಸ ಮಾಡುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಶಿಕ್ಷಕ ವರ್ಗ ತಮ್ಮ ವಯಕ್ತಿಕ ಚಿಂತೆಗಳನ್ನು ಬಿಟ್ಟು ಸುಮಾರು ೧೦ ತಿಂಗಳ ಬಳಿಕ ಶಾಲೆಗೆ ಆಗಮಿಸುವ ಮಕ್ಕಳ ಕಲಿಕೆಯತ್ತ ಚಿಂತೆ ಮಾಡಲು ಅಣಿಯಾಗಿ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಬುಲಿಂಗನಗೌಡ ಕರೆ ನೀಡಿದರು.
ಸ್ಥಳೀಯ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯಾಗಮ ಆರಂಭವಾಗಿರುವುದು ಮಕ್ಕಳ ಭವಿಷ್ಯದ ವಿಷಯದಲ್ಲಿ ಸಂತಸದ ವಿಚಾರ. ಶಿಕ್ಷಕರ ಕೇತ್ರದಿಂದ ರಾಜ್ಯಾದ್ಯಂತ ಆಯ್ಕೆಯಾಗಿರುವ ೩೨೦೦ ಜನಪ್ರತಿನಿಧಿಗಳೂ ಸೇರಿ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಬೇಕು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಹೋರಟ ಮಾಡಲು ಸಂಘಟನೆ ಬದ್ಧವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷ ಚಂದ್ರಶೇಖರ, ತಾಲೂಕು ಅದ್ಯಕ್ಷ ಗುರುಸಂಗಯ್ಯ ಗಣಾಚಾರಿ, ಹನುಮಂತಪ್ಪ ಕುಳಗೇರಿ, ಮಾನಪ್ಪ, ಮಹಾಂತೇಶ ಚಿತಾಪೂರ, ಅಮರೇಶ ನಾಡಗೌಡ, ಸುಧಾ, ಬಾಲಸ್ವಾಮಿ ಮಸ್ಕಿ, ಮುಕ್ಕಣ್ಣ, ಸಿದ್ಧಲಿಂಗಪ್ಪ, ಬಸವರಾಜ ಕರಡಿ, ಹುಸೇನ್‌ಸಾಬ ಸೇರಿ ಇತರರು ಸಮಾರಂಭದಲ್ಲಿ ಇದ್ದರು.