ಮುಂಡಗೋಡ,ಜೂ.26: ತಾಲೂಕಿನ ಪಾಳಾ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಸದಸ್ಯರ ಆಯ್ಕೆ ಚುನಾವಣಾ ಪ್ರಕ್ರಿಯೆ ಶನಿವಾರ ಮಧ್ಯ ರಾತ್ರಿವರೆಗೆ ತೀವ್ರ ಬಿರುಸಿನಿಂದ ಜರುಗಿತು.
12 ಜನ ಸದಸ್ಯರ ಆಯ್ಕೆಯಲ್ಲಿ 4 ಕಾಂಗ್ರೆಸ್ ಹಾಗೂ 8 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಅಜ್ಜನಗೌಡ ಶಿವನಗೌಡ್ರ, ಪ್ರಭು ಪುಟ್ಟಪ್ಪ ಕಬ್ಬೂರ, ರಾಮಲಿಂಗ ತಿರಕಪ್ಪ ವಗ್ಗಣ್ಣವರ, ಸುರೇಶ ಸುಭಾಂಜಿ, ಸೈಯ್ಯದ ಅಮಾನುಲ್ಲಾ ಮೋದಿನಸಾಬ ಮೈದು ಸೇರಿದಂತೆ 5 ಜನ ಆಯ್ಕೆಯಾದರೆ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸುರೇಶ ಕಾಶಪ್ಪ ಚಲವಾದಿ, ಪರಿಶಿಷ್ಟ ಪಂಗಡದಿಂದ ಮಲ್ಲೇಶಪ್ಪ ಪುಟ್ಟಪ್ಪ ಶಂಕ್ರಿಕೊಪ್ಪ, ಹಿಂದುಳಿದ ಅ-ವರ್ಗ ಕ್ಷೇತ್ರದಿಂದ ಮದಾರಸಾಬ ಮನಿಯಾರ, ಹಿಂದುಳಿದ-ಬ ವರ್ಗದಿಂದ ಮಂಜುನಾಥ ಅಂದೆಣ್ಣನವರ(ಅಂಗಡಿ), ಮಹಿಳಾ ಕ್ಷೇತ್ರದಿಂದ ಸರೋಜಾ ಮಹಾಬಲೇಶ್ವರ ಕೋಡಿಯಾ, ಕಮಲವ್ವ ಬಸಪ್ಪ ಹಂಚಿನಮನಿ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಲಕ್ಷ್ಮಣ ಸುರೇಶ ದೇವರಗುಡ್ಡ ಅವರು ಆಯ್ಕೆಯಾಗಿದ್ದಾರೆ.
ತಡರಾತ್ರಿವರೆಗೆ ಮತ ಏಣಿಕೆ: ಸಾಮಾನ್ಯ ಕ್ಷೇತ್ರದಲ್ಲಿ ಕ್ರಮವಾಗಿ 5ನೇ ಸ್ಥಾನಕ್ಕೆ ರಾಮಲಿಂಗ ವಗ್ಗಣ್ಣವರ ಮತ್ತು ಸಂಪತ್ ಪೂಜಾರ ಇಬ್ಬರೂ ಕೂಡ ತಲಾ 259 ಮತಗಳನ್ನು ಪಡೆದು ಪಲಿತಾಂಷ ಸಮವಾಗಿದ್ದರಿಂದ ಸ್ಪರ್ಧಾಳುಗಳ ಅಭಿಪ್ರಾಯ ಹಾಗೂ ಅನುಮತಿಯೊಂದಿಗೆ ಕುಲಗೆಟ್ಟ ಮತಗಳನ್ನು ಪರಿಷ್ಕರಿಸುವ ಮೂಲಕ ಮತ್ತೊಮ್ಮೆ ಮರು ಏಣಿಕೆ ನಡೆಸಲಾಯಿತು. ಮರು ಮತ ಏಣಿಕೆಯಲ್ಲಿ ರಾಮಲಿಂಗ ವಗ್ಗಣ್ಣವರ 1 ಮತ ಹೆಚ್ಚು ಪಡೆದಿದ್ದರಿಂದ ಅವರನ್ನು ಜಯಶಾಲಿ ಎಂದು ಘೋಷಿಸಲಾಯಿತು. 9 ಘಂಟೆ ವೇಳೆಗಾಗಲೇ ಮತ ಏಣಿಕೆ ಮುಕ್ತಾಯಗೊಂಡು ಇನ್ನೇನು ಪಲಿತಾಂಷ ಪ್ರಕಟಿಸಲು ಮುಂದಾದಾಗ ಇಬ್ಬರು ಸ್ಪರ್ಧಾಳುಗಳು ಸಮನಾದ ಮತ ಪಡೆದಿದ್ದರಿಂದ ಒಂದು ಸ್ಥಾನಕ್ಕಾಗಿ ಮತ್ತೊಮ್ಮೆ ಮತ ಏಣಿಕೆ ನಡಸಲಾಗಿದ್ದರಿಂದ ರಾತ್ರಿ 12 ಘಂಟೆಯವರೆಗೆ ಮತ ಏಣಿಕೆ ಪ್ರಕ್ರಿಯೆ ನಡೆಯಿತು. ಸಹಕಾರ ಇಲಾಖೆ ಅಧಿಕಾರಿ ಶಕ್ತಿಪ್ರಸಾದ ಜಂಬಗಿ ಚುನಾವಣೆ ಪಲಿತಾಂಷವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಪೊಲೀಸ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.