ಪ್ರಾ.ಕೃ.ಪ.ಸ.ಸಂ.ನಿ ೬೮ ನೇ ವಾರ್ಷೀಕ ಮಹಾಸಭೆ-ಚನ್ನಪ್ಪ ಚನ್ನೂರು

ಸಿರವಾರ.ಸೆ.೨೩-ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ೬೮ ನೇ ವಾರ್ಷೀಕ ಮಹಾಸಭೆಯನ್ನು ವಿ.ಎಸ್.ಎಸ್.ಎನ್ ಆವರಣದಲ್ಲಿ ಹಮ್ಮಿಕೊಳಲಾಯಿತು. ಸಭೆಯ ಅದ್ಯಕ್ಷತೆ ಸಂಘದ ಅದ್ಯಕ್ಷರಾದ ಚನ್ನಬಸವ ಚನ್ನೂರು ಉದ್ಘಾಟಿಸಿ ನಂತರ ಮಾತನಾಡಿದ ಅವರು ಒಬ್ಬರಿಗೆ ಒಬ್ಬರು ಸಹಕಾರ ಮಾಡುವ ಉದೇಶದಿಂದ ಸಹಕಾರ ಸಂಘಗಳು ಪ್ರಾರಂಭವಾಗಿವೆ.
ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದ ಪ್ರತಿಯೊಬ್ಬ ರೈತರು ೦% ಬಡಿಯಲ್ಲಿ ಸಾಲ ಪಡೆಯುವಂತಾಗಿದೆ. ಇಂದು ಎಲ್ಲಾರೂ ಸಾಲ ಮರುಪಾವತಿ ಮಾಡಿದರಿಂದ ಹಿಂದೆ ನಷ್ಟದಲ್ಲಿ ಸಾಗಿದ ಸಹಕಾರ ಸಂಘವು ಇಂದು ಲಾಭದಲ್ಲಿ ಸಾಗಿದೆ. ಸಂಘದ ಕಛೇರಿ ಪಕ್ಕದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಸಹಕಾರಿಯ ಕಟ್ಟಡಗಳ ಬಾಡಿಗೆಯು ಸಹ ಲಾಭಕ್ಕೆ ಸಹಕಾರಿಯಾಗಿದೆ. ೨೦೨೧-೨೨ ನೇ ಸಾಲಿಗೆ ೬,೫೭,೯೭೨ ಲಾಭವಾಗಿದೆ ಎಂದರು. ಪ್ರಾಸ್ತಾವಿಕವಾಗಿ ವಿಎಸ್.ಎಸ್.ಎನ್.ಮಾಜಿ ಅಧ್ಯಕ್ಷ ಎನ್.ಚಂದ್ರಶೇಖರ ಮಾತನಾಡಿದರು.ಆರ್.ಡಿ.ಸಿ.ಸಿ ಬ್ಯಾಂಕಿನ ಸಿರವಾರ ವೃತ್ತ ವಿಕ್ಷಕರಾದ ಬಸವಲಿಂಗಪ್ಪ ಮಾತನಾಡಿ ಆರ್.ಡಿ.ಸಿ.ಸಿ ಬ್ಯಾಂಕ ಸಹ ರೈತರ ಸಂಘವಾಗಿದೆ.
ಸಿರವಾರದಲ್ಲಿ ಶಾಖೆ ಪ್ರಾರಂಭವಾಗಿದೆ. ಸಾಲ ಮರುಪಾವತಿ ದಿನಾಂಕ ತಿಳಿದು ಮರುಪಾವತಿಸಿ, ಸ್ನೇಹಿತರು ಸಾಲ ಪಡೆದರೆ ಅವರಿಗೂ ಮರುಪಾವತಿ ಮಾಡುವಂತೆ ಹೇಳಿ, ಸಹಕಾರ ಲಾಭಕ್ಕೆ ಕೈಜೊಡಿಸಿ ಎಂದರು. ಸಂಘದ ಹೆಸರಿನಲ್ಲಿರುವ ಟ್ರ್ಯಾಕ್ಟರ್, ರಾಸಿ ಯಂತ್ರ, ಇನ್ನಿತರ ಯಂತ್ರಗಳನ್ನು ಹರಾಜು ಮಾಡಿ ಎಂದು ರೈತರು ಒತ್ತಾಯಿಸಿದರು.
ಉಪಾದ್ಯಕ್ಷರಾದ ದೇವಪುತ್ರಪ್ಪ, ನಿರ್ಧೇಶಕರಾದ ಎನ್.ಬಸ್ಸಪ್ಪಗೌಡ, ಎಂ.ನಾಗರಾಜಗೌಡ, ಚಂದ್ರುಕಳಸ, ಆಂಜನೇಯ್ಯ, ಮಲ್ಲಿಕಾರ್ಜುನ ಮಡ್ಡಿ, ಇಮಾನವೇಲ್,ಕಲ್ಲೂರು ಬಸವರಾಜ ನಾಯಕ, ಆನಂದಪ್ಪ, ಬಸವರಾಜ, ಸಂಘದ ಮುಖ್ಯಾಧಿಕಾರಿ ಗೌಸ್ ಮೊಹಿನೂದ್ದಿನ್, ರಾಮಚಂದ್ರ, ಹನುಮೇಶ ಇದ್ದರು.