ಸಿಂಧನೂರು ಸೆ.೨೧ ತಾಲೂಕಿನ ಉಮಲೂಟಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨ – ೨೩ ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.
ಸಹಕಾರ ಸಂಘಗಳ ಸ್ಥಾಪಕ ,ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಕಾರ್ಯಕ್ರಮ ಪ್ರಾರಂಭಿಸಿ ಕಳೆದ ವರ್ಷದ ವಾರ್ಷಿಕ ಮಹಾಸಭೆಯ ಗೊತ್ತುವಳಿ ಗಳನ್ನು ಮತ್ತು ಪ್ರಸ್ತುತ ವರ್ಷದ ಗೊತ್ತುವಳಿಗಳನ್ನು ಓದಿ ಅನುಮತಿ ಪಡೆಯಲಾಯಿತು .ಬೈಲಾ ತಿದ್ದುಪಡಿ ಮಾಡುವುದು ಸೇರಿದಂತೆ ಇಪ್ಪತ್ತಾರು ವಿಷಯ ಗಳ ಕುರಿತು ಚರ್ಚಿಸಲಾಯಿತು .
ನಂತರ ಸಂಘದ ನಿರ್ದೇಶಕರಾದ ಪಂಪಾಪತಿ ಬಿ ಹೂವಿನಬಾವಿ ಮಾತನಾಡಿ ಮಹಾಸಭೆಯ ಉದ್ದೇಶ ಕಳೆದ ವರ್ಷದ ಹಿನ್ನೋಟ ಹಾಗೂ ಪ್ರಸ್ತುತ ವರ್ಷಗಳಲ್ಲಿ ಇಟ್ಟಂತಹ ಬೇಡಿಕೆಗಳಿಗೆ ಅನುಮೋದನೆ ಪಡೆಯುವುದು ನಿಜಕ್ಕೂ ಉತ್ತಮ ರೀತಿಯ ಸು ಸಂಧರ್ಭ ಎಂದು ಮಾತನಾಡಿದರು.
ಬರಗಾಲ ಇರುವುದರಿಂದ ಸಾಲ ಮನ್ನಾ ಆಗಬೇಕು ಮತ್ತು ಹೆಚ್ಚುವರಿ ಸಾಲ ನೀಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಸೋಸೈಟಿ ಸದಸ್ಯರು ಸಭೆಯ ಮುಂದಿಟ್ಟರು ತುರವಿಹಾಳ ಆರ್.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಶಂಕರ್ ರಾಠೋಡ ಮಾತನಾಡಿ ಈಗಾಗಲೇ ಹೆಚ್ಚಿನ ಅನುದಾನ ಕೊಡಲಾಗಿದೆ ( ಆರು ಕೋಟಿ ಅರವತ್ತೆಂಟು ಲಕ್ಷ) ಎಂದು ಮಾಹಿತಿ ನೀಡಿದರು .
ರೈತರಿಗೆ ಬಿತ್ತನೆಯ ಬೀಜಗಳನ್ನು ಅವಶ್ಯಕ ಸಮಯದಲ್ಲಿ ನೀಡಬೇಕು ,ಸಂಘಕ್ಕೆ ನರೇಗಾದಡಿಯಲ್ಲಿ ಗೋದಾಮು ಕಟ್ಟಿಕೊಡುವಂತೆ ಪಂಚಾಯತಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಭದ್ರಗೌಡ ಪಾಟೀಲ ಸಂಘದ ಸದಸ್ಯರು ( ರೈತರಿಗೆ ) ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ಅಮರೇಶ ಮೇಟಿ ವಹಿಸಿದ್ದರು ,ನಿರ್ಧೇಶಕರಾದ ಶರಣೇಗೌಡ ಕಲ್ಮಂಗಿ , ಸೋಮಪ್ಪ ಮಾಲಿ ಉಮಲೂಟಿ ,ಅಶೋಕ ಪಾಟೀಲ ಕಲ್ಮಂಗಿ,ಲಕ್ಷ್ಮೀ ವಿರೇಶ ಪ್ಯಾಟೇಗೌಡ್ರ ,ಲಲಿತಮ್ಮ ಹನುಮಂತ ಕಿಚುಡಿ ಉಮಲೂಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಗಳಾದ ವೀರಭದ್ರಯ್ಯ ಸ್ವಾಮಿ ,ಖಾಸಿಂ ,ರುದ್ರಯ್ಯ ಸ್ವಾಮಿ ಸೇರಿದಂತೆ ಹಲವಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.