ಪ್ರಾರ್ಥಿವ ಶರೀರಕ್ಕೆ ಗೌರವಾರ್ಪಣೆ: ಮಾತಿನ ಚಕಮಕಿ-ಪೋಲಿಸ್ ಮಧ್ಯ ಪ್ರವೇಶ

ಸುಳ್ಯ, ಜೂ.೭- ಅರಂತೋಡು ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೊನಿಯ ಕಾಂಗ್ರೆಸ್ ಧುರೀಣ ಗಣೇಶ್ ರವರ ಪ್ರಾರ್ಥಿವ ಶರೀರ ಅಡ್ಯಡ್ಕಕ್ಕೆ ತಂದು ರುದ್ರ ಭೂಮಿಯಲ್ಲಿ ಭಾನುವಾರ ಅಂತ್ಯ ಸಂಸ್ಕಾರ ಮಾಡಲಾಯಿತು. ಅಡ್ಯಡ್ಕದಲ್ಲಿ ಪಾರ್ಥಿವ ಶರೀರಕ್ಕೆ ಗೌರವಾರ್ಪಿಸುವ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯ ಪ್ರವೇಶದಿಂದ ಶಮನವಾದ ಘಟನೆಯೂ ನಡೆಯಿತು.
ಗಣೇಶ್ ಅಡ್ಯಡ್ಕರವರು ಕೊರೊನಾ ಪಾಸಿಟಿವ್ ಬಂದು ಮೃತರಾದುದರಿಂದ ಅವರ ಪಾರ್ಥಿವ ಶರೀರವನ್ನು ನಿಯಮಾವಳಿ ಪ್ರಕಾರ ನೇರವಾಗಿ ರುದ್ರಭೂಮಿಗೆ ಕೊಂಡೊಯ್ಯಬೇಕಾಗಿತ್ತು. ಆದರೆ ಮನೆಯವರ ಒತ್ತಾಯದ ಮೇರೆಗೆ ಪ್ರಾರ್ಥಿವ ಶರೀರವನ್ನು ಸಿಆರ್ ಸಿ ಗ್ರೌಂಡ್ ನಲ್ಲಿ ಇಟ್ಟು ಗಣೇಶರ ಪತ್ನಿ ಮತ್ತು ಮಗಳು ಪಿಪಿಇ ಕಿಟ್ ಹಾಕಿ ನೋಡಲು ಅವಕಾಶ ಕೊಡಲಾಯಿತು.ಅಗ ಗಣೇಶರ ತಮ್ಮ ಅಣ್ಣಾ
ದೊರೆಯವರ ಮಗ ಪ್ರಶಾಂತ್ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಬೇಕು. ಶರೀರದ ಮೇಲೆ ಹೂವಿನ ಹಾರ ಹಾಕಿ ಕಾಂಗ್ರೆಸ್ ಧ್ವಜ ಹಾಕಿ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು.
ಈ ಸಮಯದಲ್ಲಿ ಶಂಕರಲಿಂಗಂ, ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಸದಸ್ಯ ರಾದ ಶಿವಾನಂದ ಕುಕ್ಕುಂಬಳರವರು ಅಂಬ್ಯುಲೆನ್ಸ್ ಚಾಲಕನ ಜೊತೆ ‘ಶರೀರವನ್ನು ಬೇಗನೆ ಸ್ಮಶಾನಕ್ಕೆ ತೆಗೆದು ಕೊಂಡು ಹೋಗಬೇಕು.ಕಾನೂನು ಪ್ರಕಾರ ಇಲ್ಲಿ ಇಡುವಂತಿಲ್ಲ ಎಂದರು. ಅದಕ್ಕೆ ಪ್ರಶಾಂತ್ ವಿರೋಧ ವ್ಯಕ್ತಪಡಿಸಿದರು. ಆಗ ಶಂಕರ್‌ಲಿಂಗಂ ರಿಗೂ ಪ್ರಶಾಂತರಿಗೂ ಮಾತಿನ ಚಕಮಕಿ ನಡೆಯಿತು.
ಅದೇ ಸಂದರ್ಭದಲ್ಲಿ ೧೨ದಿನಗಳ ಹಿಂದೆ ತೀರಿಕೊಂಡ ಸುಬ್ರಹ್ಮಣ್ಯ ರವರ ಮನೆಯವರು ನಮ್ಮ ತಂದೆಯವರ ಶರೀರವನ್ನು ಇಡಲು ಇದೇ ಪ್ರಶಾಂತ್ ಮೊನ್ನೆ ಅಡ್ಡಿ ಪಡಿಸಿದ್ದು ಇವತ್ತು ಅವನ ಸಂಬಂಧಿಕರನ್ನು ಇಲ್ಲಿ ನಿಲ್ಲಿಸಿದ್ದು ಹೇಗೆ? ಎಂದು ಗಟ್ಟಿಯಾಗಿ ಪ್ರಶ್ನಿಸತೊಡಗಿದರು. ಇದೇ ಸಂದರ್ಭದಲ್ಲಿ ಎ.ಎಸ್.ಐ ರವೀಂದ್ರರು ಮತ್ತು ಪೋಲೀಸರು ಅಲ್ಲಿದ್ದರನ್ನು ಚದುರಿಸಿ ಅಲ್ಲಿಂದ ಪ್ರಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕಳುಹಿಸಿದರು.
ಕಾಂಗ್ರೆಸ್ ಮುಖಂಡ ಟಿ.ಎಮ್.ಶಹೀದ್, ಕಿಶೋರ್ ಉಳುವಾರು, ಉಮಾಶಂಕರ್ ಅಡ್ಯಡ್ಕ ವೇಣು ಗೋಪಾಲ, ಪುಷ್ಪಾಧರ, ದಯಾನಂದ ಕುರುಂಜಿ, ಸೋಮಶೇಖರ ಪೈಕ, ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾಜುದ್ದೀನ್ ಅರಂತೋಡು ಮೊದಲಾದವರು ಇದ್ದರು. ಸ್ಮಶಾನದಲ್ಲಿ ಸುಡಲು ಕಟ್ಟಿಗೆ ವ್ಯವಸ್ಥೆ ಯನ್ನು ಊರವರು ಮಾಡಿದ್ದರು. ಸೇವಾ ಭಾರತಿಯ ಪ್ರಕಾಶ್ ಯಾದವ್ ಕಿಲಾರ್ಕಜೆ, ನವೀನ್ ಎಲಿಮಲೆ, ನವೀನ್ ಸುಳ್ಯ , ಸನತ್ ಜೊಕ್ಕಾಡಿ,ಸಾಗರ್ ರೈ ಕಾರ್ಯತೋಡಿ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು.