ಪ್ರಾರ್ಥನೆ ಮತ್ತು ಗುರಿ ವಿರುದ್ಧ ದಿಕ್ಕಿನಲ್ಲಿ ಸಾಗದಿರಲಿ: ತಾಜುದ್ದೀನ್ ಸಾಹೇಬ್

ಯಾದಗಿರ,ಜೂ.26- ತಮ್ಮ ಸಂತಾನ ದೈವ ಭಕ್ತರಾಗಿ ಅಲ್ಲಾಹನ ಮಾಗ9ದಲ್ಲಿ ಸಾಗುವಂತೆ ಪಾಲಕರು ಸಂಸ್ಕಾರ ನೀಡಬೇಕು ಎಂದು ಅಹ್ಮದಿಯಾ ಅನ್ಸಾರುಲ್ಲಾಹ ರಾಷ್ಟ್ರೀಯ ಅಧ್ಯಕ್ಷ ಎಂ.ತಾಜುದ್ದೀನ್ ಅಹ್ಮದ್ ಸಾಹೇಬ್ ಕರೆ ನೀಡಿದರು.
ನಗರದ ಅಹ್ಮದಿಯಾ ಮೊಹಲ್ಲ ಮಜೀದ್ ಏ ಹಸನ್ ಮೈದಾನದಲ್ಲಿ ರವಿವಾರ (25/06/23) ಆಯೋಜಿಸಿದ್ದ ಯಾದಗಿರ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಅನ್ಸಾರುಲ್ಲಾಹರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವನ ಅನುಗ್ರಹದ ಸುರಿಮಳೆಯ ಭಾಗ್ಯವನ್ನು ಪಡೆಯಲು ಗುರಿ ಮತ್ತು ಪ್ರಾಥ9ನೆ ವಿರುದ್ಧ ದಿಕ್ಕಿನಲ್ಲಿ ಸಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
40 ವಯಸ್ಸು ದಾಟಿದ ಪ್ರತಿಯೋಬ್ಬರೂ ದೇವ ಸಂದೇಶ ಪ್ರಚಾರಕರು ಅವರೇ ಅನ್ಸಾರುಲ್ಲಾಹ ಎಂದು ಕರೆಸಿಕೊಳ್ಳುತ್ತಾರೆ. ಅವರು, ದೇವನ ಸಹಾಯಕರಾಗಿ ತಮ್ಮ ಮಕ್ಕಳಿಗೆ ನೈತಿಕತೆಯ ಸಂಸ್ಕಾರ ನೀಡಬೇಕು ಇದುವೇ ತಮ್ಮ ಸಂತಾನಗಳಿಗೆ ನೀಡುವ ಶ್ರೇಷ್ಠ ಮಟ್ಟದ ಉಡುಗೊರೆ ಯಾಗಿದೆ.
ತಾವು ಮೈಗೂಡಿಸಿಕೊಂಡ ನೈತಿಕತೆ, ಧಾರ್ಮಿಕ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಕಿರಿಯರು ಕಲಿತುಕೊಳ್ಳು ಮಾದರಿ ಯಾಗುವಂತೆ ನಮ್ಮ ನಡೆನುಡಿ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಗತ್ಯವಿದೆ.
ಗುಲಬರ್ಗಾ ವಿಶ್ವ ವಿದ್ಯಾಲಯ ಉದು9 ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ ರಬ್ ಉಸ್ತಾದ್ ಮಾತನಾಡಿ, ಪ್ರವಾದಿಯ ಜೀವನ ಕ್ರಮ ಪವಿತ್ರ ಕುರಆನ್ ಆಗಿದೆ, ಎರಡು ಮೂರು ದಿನಗಳಿಂದ ಹಸಿವೆಯ ಕಾರಣದಿಂದ ಬಳಲುತ್ತಿದ್ದ ಪ್ರವಾದಿಯ ಅನುಯಾಯಿಗಳು, ಎಷ್ಟೊಂದು (ಸಂಯಮ) ತಾಳ್ಮೆಯನ್ನು ವಹಿಸುತ್ತಿದ್ದರೆಂದರೆ ತಮಗಿಂತ ಹೆಚ್ಚು ಹಸಿದವರಿಗೆ ಮೊದಲು ಊಟ ನೀರು ಬಡಿಸಲು ಮುಂದಾಗುತ್ತಿದ್ದರು. ತಾಳ್ಮೆಯು ಅತ್ಯಂತ ಶ್ರೇಷ್ಠತಮ ಅಸ್ತ್ರವಾಗಿದೆ ಎಂದರು.
ಮೌಲ್ವಿ ತಯ್ಯಬ ಅಹ್ಮದ್ ಖಾನ್ ಮಾತನಾ, ಸಜ್ಜನ ಭಕ್ತಾದಾಸರಾದ ಅನ್ಸಾರುಲ್ಲಾಹ ರಿಗೆ ಅಲ್ಲಾಹನು ರಕ್ಷಕನಾಗಿದ್ದಾನೆ. ನಾವು ದೈವಿಯ ಜ್ಞಾನ ಪ್ರಾಪ್ತಿಯ ಮೂಲಕ ಆತ್ಮವನ್ನು ಸಂತುಷ್ಠ ಗೊಳಿಸಲು ಸಾಧ್ಯ ಇದನ್ನು ಖಿಲಾಫತ್ತಿನ ಅನುಗ್ರಹದ ಹೊರತು ಪ್ರಾಪ್ತಿಯಾಗದು ಎಂದರು.
ಕಾಯ9ಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾದಗಿರ ಅಮೀರ್ ಜಮಾತ್ ಸೌದಗರ ಮಾತನಾಡಿ, ಈ ಯುಗದ ಇಮಾಮ್ ಮಸಿ ಮೌವೂದ್ (ಕ್ರೈಸ್ತ-ಕಲ್ಕಿ) ಅವತಾರ ಹಜರತ್ ಮಿಜಾ9 ಗುಲಾಂ ಅಹ್ಮದ್ ಖಾದಿಯಾನಿ ಅವರು, ಹಗಲು ರಾತ್ರಿ ಮಸೀದಿಯಲ್ಲಿ ಇದ್ದುಕೊಂಡು ಪ್ರಾಥ9ನೆ ಮಾಡುತ್ತಿದ್ದರು, ತಮ್ಮ ಪಾಲಿನ ಊಟವನ್ನು ಅತಿಥಿ ಸತ್ಕಾರಕ್ಕೆ ಬಳಸುತ್ತಿದ್ದರು, ತಮ್ಮ ಬಳಿ ಇಟ್ಟುಕೊಂಡಿರುವ ಉರಿದ ಕಡಲೆ ತಿಂದು ದಿನಗಳನ್ನು ದೂಡಿತ್ತಿದ್ದರು ಹೆಚ್ಚಿನ ಸಮಯ ಉಪವಾಸ (ರೋಜ) ಕೈಗೊಳ್ಳುತ್ತಿದ್ದರು. ದಾರಿತಪ್ಪಿದ ಸಮುದಾಯಕ್ಕೆ ಇಸ್ಲಾಮಿನ ನೈಜ ಸಂದೇಶವನ್ನು ಭೋದಿಸಿದರು ಆ ಮೂಲಕ ಅಲ್ಲಾಹನೊಂದಿಗಿನ ಸಂಬಂಧವನ್ನು ಕಡಿದುಕೊಂಡ ಸಮುದಾಯಕ್ಕೆ ಅಲ್ಲಾಹನ ಆಶ್ರಯ ಸಂಬಂಧವನ್ನು ಪುನರ್ ಸ್ಥಾಪಿಸಿದರು. ಅಲ್ಲಾಹನ ಅನುಗ್ರಹದ ವಾರಸು ದಾಸರನ್ನಾಗಿಸಿದ ಮಸಿಹ ಮೌವೂದ್‍ರ ಮೇಲೆ ವಿಶ್ವಾಸ ಇಡುವ ಅನುಯಾಯಿಗಳಾದ ನಾವೇ ಧನ್ಯರು ಎಂದರು.
ಬೆಳಗಿನ ಜಾವ ತಾಜೂದ್ ನಮಾಝ್ ಮತ್ತು ಪವಿತ್ರ ಕುರಆನ್ ಪಠಣದೊಂದಿಗೆ ಪ್ರಾರಂಭವಾದ ಸಮಾವೇಶದಲ್ಲಿ ಭಕ್ತಿ ಗೀತೆ ನಜಂ, ಕುರಆನ್ ವಚನಗಳÀ ಕಂಠಪಾಠ, ಭಾಷಣ, ಕಬಡ್ಡಿ, ವಾಲಿಬಾಲ್, ಮ್ಯುಜಿಕಲ್ ಚೇರ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೌಲ್ವಿ ಸಮೀರ ಅಹ್ಮದ ಅವರು, ತಮ್ಮ ತಂದೆ ತಾಯಿ, ಪತ್ನಿ ಮತ್ತು ಮಕ್ಕಳು ಒಟ್ಟಿನಲ್ಲಿ ನಮ್ಮ ಪ್ರೀತಿಯ ಕುಟುಂಬಕ್ಕಿಂತಲು ಮೀಗಿಲಾಗಿ ಪÀ್ರವಾದಿ ಮೊಹ್ಮದ (ಸಅ) ಹಾಗೂ ಅಲ್ಲಾಹನನ್ನು ಪ್ರೀತಿಸಬೇಕು ಇದುವೇ ಸಾಕ್ಷತ್ಕಾರದ ಮಾರ್ಗವಾಗಿದೆ ಎಂದರು. ಅಗತ್ಯಬಿದ್ದಲ್ಲಿನಾವು ವಿಷಜಂತು ಗಳೊಂದಿಗೆ ನರಭಕ್ಷಕ ಪ್ರಾಣಿ ಗಳೊಂದಿಗೆ ಬೇಕಾದರೂ ಒಡಂಬಡಿಕೆ ಮಾಡಿಕೊಳ್ಳಬಹುದು ಆದರೇ ಪ್ರವಾದಿ ಮತ್ತು ಅಲ್ಲಾಹನ ನಿಂದಕರಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯವಿದೆ ಎಂದರು.
ಮೊಹ್ಮದ ಅಸದುದ್ಧಿನ ಸುಲ್ತಾನ ಗೌರಿ ಅವರು ಮಾತನಾಡಿ, 40 ದಾಟಿದ ಅನ್ಸಾರುಲ್ಲಾಹರು, ಸಾವಿನ ಸಮೀಪ ಬಂದು ನಿಂತಿದ್ದಾರೆ. ಯಾವಗಳಿಗೆಯಲ್ಲಾದರೂ ಅಲ್ಲಾಹನ್ನು ನಾವು ಭೇಟಿ ಮಾಡಬಹುದು ಹೀಗಾಗಿ ನಮ್ಮ ನುಡಿನಡೆಯ ಕರ್ಮಗಳ ಲೆಕ್ಕಪತ್ರವನ್ನು ಒದಗಿಸಬೇಕಾಗುತ್ತದೆ. ಹೆಚ್ಚೆಚ್ಚು ಸಮಯವನ್ನು ದೇವನ ಸ್ಮರಣೆಯಲ್ಲಿ ಮತ್ತು ಅವನ ಸಂದೇಶ ಪ್ರಚಾರದಲ್ಲಿ ಕಳೆಯಬೇಕು ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಅತಿಥಿಗಣ್ಯರು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಮೂರು ಜಿಲ್ಲೆಗಳ ಜಯಿಮ್ ಅನ್ಸಾರುಲ್ಲಾಹ ಅಧ್ಯಕ್ಷ ಜಾವೇದ ಅಹ್ಮದ ನದೀಮ್, ಫಜಲ ಮೊಹ್ಮದ ಸೌದಾಗರ, ಸಾದತ್ ಅಹ್ಮದ ದೇವದುರ್ಗಾ, ತಯ್ಯಬ ಅಹ್ಮದ ಅಳ್ಳೋಳ್ಳಿ, ನೂರ ಉಲ್ ಹೌದೊಡಿ, ಸೈಯದ ಅಬ್ದುಲ ಮನ್ನಾನ್, ನಯೀಮ್ ಅಹ್ಮದ ಸಾಬ ಸಗರಿ, ಫರೀದ ಅಹ್ಮ್ದ ಗುಲಬರ್ಗಿ, ಲುಕ್ಮಮಾನ್ ಅಹ್ಮದ ಶಕನಾ, ಇಬ್ರಾಹೀಮ ತಿರಗರ್ ಸೇರಿದಂತೆ ಹಲವರಿದ್ದರು. ಮೂರು ಜಿಲ್ಲೆಗಳಿಂದ 415 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮಂಗಳ ಗೊಂಡಿತು.