
ಸಂಜೆವಾಣಿ ವಾರ್ತೆ
ಗಂಗಾವತಿ, ಏ.02: ಸಾರ್ವಜನಿಕರು ಕ್ಯಾನ್ಸರ್ ರೋಗವನ್ನು ಮೊದಲ ಹಂತದಲ್ಲಿ ಇರುವಾಗಲೇ ಸೂಕ್ತ ಚಿಕಿತ್ಸೆ ಪಡೆದು ಗುಣಮುಕರಾಗಲು ಮುಂದಾಗಬೇಕು ಎಂದು ಡಾ. ಜಂಬುನಾಥ ಗೌಡ ಹೇಳಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ ಮತ್ತು ಮೈತ್ರಿ ವಿಭಾಗದ ನೇತೃತ್ವದಲ್ಲಿ ಐಎಂಯ ಭವನದಿಂದ ಹಮ್ಮಿಕೊಂಡಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್ ಸಂಭವಿಸುತ್ತವೆ. ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು ಮುಖ್ಯ ಕಾರಣ. ವಿಕಿರಣ, ಕೆಲವು ವೈರಸ್‌ಸೋಂಕುಗಳು, ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್ ಕಾರಕಗಳನ್ನಾಗಿ ಮಾಡುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವುದು ಈ ಆಚರಣೆಯ ಮೂಲ ಉದ್ದೇಶ.ಕ್ಯಾನ್ಸರ್ ನಮ್ಮ ಕೈ ಮೀರಿದ ರೋಗವಲ್ಲ ಎಂಬ ಸಂದೇಶವನ್ನು ಸಾರುವ ಉದ್ದೇಶ ವಾಗಿದೆ. ಸಾರ್ವಜನಿಕರು ಈ ಉಚಿತ ಶಿಬಿರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಈ ವೇಳೆ ಐಎಂಎ ಸಂಘದ ತಾಲೂಕಾ ಅಧ್ಯಕ್ಷ ಡಾ. ಕೆ.ಎನ್ ಮಧುಸೂಧನ್, ಡಾ.ಸುಲೋಚನಾ ಚಿನಿವಾಲರ, ಡಾ.ಸತೀಶ ರಾಯ್ಕರ್, ಡಾ.ಮಂಜುಳಾ, ಸೇರಿದಂತೆ ಅನೇಕರು ಇದ್ದರು.