ಪ್ರಾರಂಭವಾದ ಕೆಎಸ್ ಆರ್ ಟಿಸಿ ಬಸ್ ಸಂಚಾರ; ೧೦ ನೌಕರರ ವಜಾ

ದಾವಣಗೆರೆ.ಏ.೨೨; ಕಳೆದ ೧೫ ದಿನಗಳಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿಂದು ಬೆಳಗಿನಿಂದ ಎಂದಿನAತೆ ಬಸ್ ಸಂಚಾರ ಆರಂಭಗೊಂಡಿದೆ. ಈಗಾಗಲೇ ಕಳೆದ ಕೆಲದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಲವರಿಗೆ ನೋಟೀಸ್ ನೀಡಲಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿಯೂ ೧೦ ಮಂದಿ ನೌಕರರನ್ನು ವಜಾಗೊಳಿಸಲಾಗಿದೆ. ಕಳೆದ ಹದಿನೈದು ದಿನಗಳಿಂದ ದಾವಣಗೆರೆ ಹಾಗೂ ಹರಿಹರ ಸಾರಿಗೆ ವಿಭಾಗಕ್ಕೆ ೫ ಕೋಟಿ ನಷ್ಟ ಸಂಭವಿಸಿದೆ. ಇದೀಗ ಮುಷ್ಕರ ಅಂತ್ಯಗೊಂಡಿದ್ದು ಇಂದಿನಿಂದ ಬಸ್ ಸಂಚಾರ ಸುಗಮವಾಗಿ ಪ್ರಾರಂಭಗೊಂಡಿದೆ.ಇಂದು ಬೆಳಗ್ಗೆಯಿಂದ ಮಧ್ಯಾಹ್ನ ೨ ಗಂಟೆಯವರೆಗೂ ೨೦೦ ಬಸ್ ಗಳು ವಿವಿಧ ಜಿಲ್ಲೆಗಳಿಗೆ ಸಂಚರಿಸಿವೆ ಎಂದು ಕೆಎಸ್ ಆರ್ ಟಿಸಿ ಡಿಸಿ ಸಿದ್ದೇಶ್ವರ್ ಎನ್ ಹೆಬ್ಬಾಳ್ ತಿಳಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಆದರೆ ಕೋರೊನಾ ೨ ನೇ ಅಲೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಕಂಡುಬರುತ್ತಿದೆ.ನಗರದ ಬಸ್ ನಿಲ್ದಾಣದಲ್ಲಿ ಬಸ್ ಗಳಿದ್ದರು ಜನರು ಮಾತ್ರ ಕಂಡುಬರುತ್ತಿಲ್ಲ.