ಪ್ರಾರಂಭವಾದ ಅಂಗನವಾಡಿ ಕೇಂದ್ರಗಳು

ಮುದಗಲ್.ನ.೧೦-ಕೊರೋನಾ-೧೯ ಹರಡುವ ಭೀತಿ ಹಿನ್ನಲೆಯಲ್ಲಿ ಸರಕಾರ ಅಂಗನವಾಡಿ ಕೇಂದ್ರಗಳನ್ನು ಬಂದ ಮಾಡಲಾಗಿತು ಸೋಮುವಾರ ಸರಕಾರ ಮತ್ತೆ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡಲು ಅನುಮತಿ ನೀಡಿದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ವಿವಿಧಡೆ ಅಂಗನವಾಡಿ ಕೇಂದ್ರಗಳು ಪ್ರಾರಂಭ ಮಾಡಲಾಗಿತು .
ಅಂಗನವಾಡಿ ಕೇಂದ್ರಗಳನ್ನು ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತು ಪಟ್ಟಣದಲ್ಲಿ ಪುರಸಭೆ ಸದಸ್ಯ ದುರುಗಪ್ಪ ಕಟ್ಟಿಮನಿ ಬನ್ನಿಗೋಳ ಗ್ರಾಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಹಿರೇಮನಿ, ಹೂನೂರು ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯೆ ರತ್ನಮ್ಮ ವೆಂಕನಗೌಡ ಹೊಸಗೌಡ್ರ ,ಕನಸಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅಮರಮ್ಮ ಹುಸೇನಪ್ಪ ಹಾಗೂ ಭೀಮಣ್ಣ ಹೂಗಾರ ಮಕ್ಕಳಿಗೆ ಹೂ ಕೊಡುವ ಮೂಲಕ ಸ್ವಾಗತ ಕೋರಿದರು .
ಇದೆ ಸಂದರ್ಭದಲ್ಲಿ ಬನ್ನಿಗೋಳ ಗ್ರಾ.ಪಂ ಸದಸ್ಯ ಮಹಾಂತೇಶ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ವಸ್ತ್ರದ್, ವೈದ್ಯಾಧಿಕಾರಿ ಡಾಃ ಶೇಕ್ಷಾವಲಿ ,ಅಂಗನಾಡಿ ಕಾರ್ಯಕರ್ತೆಯರಾದ ಗಂಗಮ್ಮ ,ವಿದ್ಯಾವತಿ ,ಮಲ್ಲಮ್ಮ ,ಮುಖ್ಯಗುರುಗಳಾದ ವಿರುಪಾಕ್ಷಯ್ಯ ,ಶೀಲಾ , ಸುವರ್ಣ ಹೂನೂರು ಗಂಗಮ್ಮ ಕನಸಾವಿ ಹಾಗೂ ಅಮರಮ್ಮ ತೆರೆಬಾವಿ. ಶಶಿಕಲಾ ಲಿಂಗಸುಗೂರು ಸೇರಿದಂತೆ ಅಂಗನವಾಡಿ ಸಹಾಯಕಿಯರು ಇದ್ದರು .