“ಪ್ರಾಮಿಸ್” ಚಿತ್ರದ ಚಿತ್ರೀಕರಣ ಮುಕ್ತಾಯ

ವಿಜಯಪುರ, ಜು.9-ನಟ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸುತ್ತಿರುವ 6ನೇ ಚಿತ್ರ “ಪ್ರಾಮಿಸ್” ಚಿತ್ರವು ಜೂನ್ 22 ರಂದು ಚಿತ್ರಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿತ್ತು. ಹಿರಿಯ ಪತ್ರಿಕೋದ್ಯಮಿ ಟಿ. ಕೆ ಮಲಗೊಂಡವರು ಕ್ಲ್ಯಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು.
ಸತತ 10 ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಭರ್ಜರಿಯಾಗಿ ಪ್ರಾಮಿಸ್ ಚಿತ್ರದ ಚಿತ್ರೀಕರಣ ನಡೆದಿದ್ದು ಸದ್ಯ ಚಿತ್ರೀಕರಣ ಮುಕ್ತಾಯಗೊಂಡು ಅತೀ ಶೀಘ್ರದಲ್ಲೇ ಚಿತ್ರದ ತಾಂತ್ರಿಕ ಕೆಲಸಗಳು ಪ್ರಾರಂಭವಾಗಲಿದೆ.
ಕೊನೆಯ ದಿನ ಚಿತ್ರೀಕರಣ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಮುಕ್ತಾಯಗೊಂಡಿದ್ದು, ಇಂಚಗೇರಿ ಮಠ ಪೀಠಾಧಿಪತಿ ಶ್ರೀ ಸ ಸ ರೇವಣಸಿದ್ಧೇಶ್ವರ ಮಹಾರಾಜರಿಗೆ ಪ್ರಾಮಿಸ್ ಚಿತ್ರತಂಡದಿಂದ ಸನ್ಮಾನಿಸಲಾಯಿತು. ನಂತರ ಅವರು ಚಿತ್ರತಂಡಕ್ಕೆ ಆಶೀರ್ವಾದಿಸಿ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ “ಪ್ರಾಮಿಸ್ ಚಿತ್ರವು ಸಂಪೂರ್ಣವಾಗಿ ಯುವಉತ್ಸಾಹಿಗಳಿಂದ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು, ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಹೊಂದಿದೆ. ಈ ಚಿತ್ರವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿ, ಎಲ್ಲ ಯುವಕರ ಜನಪ್ರಿಯತೆ ಹೆಚ್ಚಾಗುವ ಅವಕಾಶವಿದೆ” ಎಂದು ಶುಭಕೋರಿದರು.
ಇನ್ನೂ ಪ್ರಾಮಿಸ್ ಚಿತ್ರದಲ್ಲಿ ನಾಯಕ ನಟನಾಗಿ ವಿಶ್ವಪ್ರಕಾಶ ಟಿ ಮಲಗೊಂಡ, ನಾಯಕಿಯಾಗಿ ಸಾನ್ವಿ, ತಂದೆ ಪಾತ್ರದಲ್ಲಿ ಹಿರಿಯ ಕಲಾವಿದ ಸಂತೋಷ ಉಪ್ಪಿನ, ತಾಯಿ ಪಾತ್ರದಲ್ಲಿ ಮಂಜುಳಾ ಹಿಪ್ಪರಗಿ, ಸ್ನೇಹಿತರ ಪಾತ್ರದಲ್ಲಿ ಲಕ್ಕಿ ಎಸ್ ವಿ, ಪ್ರೀಯಾಂಕ, ಯೋಗಿರಾಜ ಮುಳಗೆ, ಮಲ್ಲು ಎನ್ ವಿ, ನಟಿಯ ಅಣ್ಣನ ಪಾತ್ರದಲ್ಲಿ ವಿರೇಶ್ ರಾಯಚೂರು, ಸಹ ಕಲಾವಿದರ ಪಾತ್ರದಲ್ಲಿ ದತ್ತಾತ್ರೇಯ ಹಿಪ್ಪರಗಿ, ವಿರೇಶ ಎಸ್ ಎಚ್, ಪ್ರೃಥ್ವಿ ನಾಯಕ, ಸಿದ್ದು ತಳ್ಳೋಳ್ಳಿ ಸೇರಿದಂತೆ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಪ್ರಾಮಿಸ್ ಚಿತ್ರವೂ ಮಲಗೊಂಡ ಫೀಲಂ ಎಂಟ್ರಟೈನ್ ಮೆಂಟ್ಸ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ, ಲಕ್ಕಿ ಎಸ್ ವಿ ನಿರ್ದೇಶನದಲ್ಲಿ, ರವಿ ಕುಂಟೋಜಿ ಛಾಯಾಗ್ರಹಣ, ಸಂಕಲನ ವಿಕ್ಕಿ, ಸಹಕಾರ ನಿರ್ದೇಶಕ ಪವನ್ ಕುಮಾರ್ ಬೂದಿಹಾಳ, ಸಹ ನಿರ್ದೇಶಕ ಮಲ್ಲು ಎನ್ ವಿ, ಸುಧಾ ಹಾದಿಮನಿ, ಪೆÇ್ರಡಕ್ಷನ್ಸ್ ಹೆಡ್ ಸಿದ್ದು ತಳ್ಳೋಳ್ಳಿ, ಮೇಕಪ್ ವಿರೇಶ್, ಪೆÇೀಸ್ಟರ್ ಡಿಸೈನ್ ಸುಭಾಷ್ ಅರಸ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ಹಾಗೂ ಡಾ ವಿರೇಶ್ ಹಂಡಗಿ, ಹರೀಶ್ ಅರಸು, ಉಮೇಶ್ ಕೆ ಎನ್, ಸೇರಿದಂತೆ ಇನ್ನಿತರರು ತಂಡದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ, ನಿರ್ಮಾಪಕಿ ಮಾದೇವಿ ಟಿ ಮಲಗೊಂಡ, ಚಿತ್ರದ ನಾಯಕ ನಟ ವಿಶ್ವಪ್ರಕಾಶ ಟಿ ಮಲಗೊಂಡ, ಹಿರಿಯ ಕಲಾವಿದ ಸಂತೋಷ ಉಪ್ಪಿನ, ನಿರ್ದೇಶಕ ಲಕ್ಕಿ ಎಸ್.ವಿ, ಮಲ್ಲಿಕಾರ್ಜುನ ಪತ್ತಾರ, ಪವನ್ ಬೂದಿಹಾಳ, ಹನಮಂತ ಐಹೊಳೆ, ಸಿದ್ದು ತಳ್ಳೊಳ್ಳಿ, ಸಚಿನ್ ತಳ್ಳೊಳ್ಳಿ, ಮತ್ತಿತರರು ಉಪಸ್ಥಿತರಿದ್ದರು.