ಪ್ರಾಮಾಣಿಕ ಸೇವೆಯಿಂದ ವಿಶ್ವಾಸ ಗಳಿಸಲು ಸಾಧ್ಯ


ಬ್ಯಾಡಗಿ,ನ.5:ಸಾರ್ವಜನಿಕರಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ನಿಸ್ವಾರ್ಥ ಮನೋಭಾವನೆಯಿಂದ ಸೇವೆಯನ್ನು ಒದಗಿಸಲು
ಮುಂದಾದಲ್ಲಿ ಮಾತ್ರ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಲು ಸಾಧ್ಯವೆಂದು ತಾಲೂಕಾ ಲಿಯಾಪಿ ಸಂಘದ ಅಧ್ಯಕ್ಷ ನಾಗೇಶ ಗುತ್ತಲ ಹೇಳಿದರು.
ಪಟ್ಟಣದ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಓ ಈರಣ್ಣ ತೇರದಾಳ ಅವರ ವರ್ಗಾವಣೆಯ ನಿಮಿತ್ಯ ತಾಲೂಕಾ ಲಿಯಾಪಿ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸ್ಥಳೀಯ ಜೀವವಿಮಾ ನಿಗಮದ ಏಜೆಂಟರೊಂದಿಗೆ ಯೋಜನೆಗಳ ಕುರಿತು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಎಎಓ ಈರಣ್ಣ ತೇರದಾಳ ತಮ್ಮ ಸಹಕಾರವನ್ನು ನೀಡಿದ್ದಾರೆಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿ ಶಾಖೆಗೆ ವರ್ಗಾವಣೆಗೊಂಡಿರುವ ಎಎಓ ಈರಣ್ಣ ತೇರದಾಳ ಅವರನ್ನು ತಾಲೂಕಾ ಲಿಯಾಪಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಎಓ ಈರಣ್ಣ ತೇರದಾಳ ಅವರು ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲ ಏಜೆಂಟರಿಗೆ, ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಧಾರವಾಡ ವಿಭಾಗದ ಲಿಯಾಪಿ ಸಂಘದ ಕಾರ್ಯದರ್ಶಿ ಮಾಲತೇಶ ಎಲಿ, ತಾಲೂಕಾ ಸಂಘದ ಪದಾಧಿಕಾರಿಗಳಾದ ಬಿ.ವಿ.ಹಿರೇಮಠ, ಚಂದ್ರಶೇಖರ ಹುದ್ದಾರ, ಮಾಲತೇಶ ಕಮ್ಮಾರ, ಮುತ್ತಣ್ಣ ರಾಮಗೊಂಡನಹಳ್ಳಿ, ವೀಣಾ ಹುದ್ದಾರ, ದ್ರಾಕ್ಷಾಯಣಿ ಹರಮಗಟ್ಟಿ, ಅಶ್ವಿನಿ ದೊಡ್ಡಮನಿ, ಗುಡ್ಡಪ್ಪ ಹಾನಗಲ್, ಪುಟ್ಟಪ್ಪ ರಾಮಗೊಂಡನಹಳ್ಳಿ, ಶಿವಪ್ಪ ವಡ್ಡರ, ಭಾಗಮ್ಮನವರ, ಚಂದ್ರಪ್ಪ ಜಾವಜ್ಜನವರ, ವೀರೇಶ ಗಜ್ಜರಿ, ಕಚೇರಿಯ ಎಎಓ ಎಚ್.ಬಿ.ಚಲುವಾದಿ. ಗಿರೀಶ ಬಿಜಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.