ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತ ಹಾಕಿ ಗೆಲ್ಲಿಸಿ: ಸಚಿವ ಎಂ.ಬಿ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.1: ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತ ಹಾಕಿ ಗೆಲ್ಲಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಮುಸ್ಸಂಜೆ ತಿಕೋಟಾತಾಲೂಕಿನ ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರ ನಡೆಸಿ ಅವರ ಮಾತನಾಡಿದರು.
ಕಾಂಗ್ರೆಸ್ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಬ್ರಿಟಿಷರು ಎಲ್ಲವನ್ನೂ ಲೂಟಿ ಮಾಡಿದ ದೇಶದಲ್ಲಿ ನೆಹರು ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆ ಸ್ಥಾಪಿಸಿ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸಾಕಷ್ಟು ಅಭಿವೃದ್ಧಿಯಾಗಿದೆ. ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ರೇಷನ್ ಕಾರ್ಡು ನೀಡಿ, 20 ಅಂಶಗಳ ಕಾರ್ಯಕ್ರಮ ಜಾರಿ, ವೃದ್ದಾಪ್ಯ ವೇತನ, ಭೂಮಿ ಹಂಚಿಕೆ ಮಾಡಿದರು.
ರಾಜೀವ ಗಾಂಧಿ ಸಂವಹನ ಮತ್ತು ಸಂಪರ್ಕ ಕ್ರಾಂತಿ ಮಾಡಿದರು. ಮನಮೋಹನಸಿಂಗ್ ಅವರು ರೈತರ 72000 ಕೋ. ಸಾಲ ಮನ್ನಾ ಮಾಡಿದರು. ಆದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರ ಬದಲು ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಈ ಅವಧಿಯಲ್ಲಿ ತೈಲ, ಆಹಾರ, ಅಡುಗೆ ಅನಿಲ ಬೆಲೆ, ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಹೆಚ್ಚಳವಾಗಿದೆ. ಕಪ್ಪು ಹಣ ವೈಟ್ ಮಾಡಲು ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹೇಳಿರುವುದು ಇವg Àಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ನಾವು 2013-18ರ ಅವಧಿಯಲ್ಲಿ ನೀರಾವರಿ ಮಾಡಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಒಂದು ಕಾಲದಲ್ಲಿ 711 ಟ್ಯಾಂಕರ್ ನೀರು ಪೂರೈಕೆಯಾಗುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ನಾವು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಕೇವಲ 38 ಟ್ಯಾಂಕರ್ ಬಳಕೆಯಾಗುತ್ತಿವೆ. ಅದನ್ನು ಮುಂದಿನ ಆರು ತಿಂಗಳಲ್ಲಿ 10ಕ್ಕೆ ಇಳಿಸುತ್ತೇವೆ. ಈ ಭಾಗದಲ್ಲಿ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಹರಿಸಲು ಹೊಲಗಾಲುವೆ ಕಾಮಗಾರಿ ಪ್ರಾರಂಭವಾಗಲಿದೆ. ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಮತ್ತು ಬಸವ ನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ರಾಜು ಆಲಗೂರ ಅವರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ತರಬೇಕು. ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತ ಹಾಕಿ ಗೆಲ್ಲೆಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಾಲಿಂಗ ಹೊನವಾಡ, ಸಿದ್ದನಗೌಡ ರುದ್ರಗೌಡರ, ಪಿ. ಆರ್. ಆಯತವಾಡ, ರಾಮನಿಂಗ ಎ. ಮಸಳಿ, ಆರ್. ಎನ್. ಬಿರಾದಾರ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ಬರಪೀಡಿತ ಪ್ರದೇಶವಾಗಿದ್ದ ನಮ್ಮ ಭಾಗಕ್ಕೆ ನೀರಾವರಿ ಮೂಲಕ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಅವರು ಕರೆಗೆ ಓಗೊಟ್ಟು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವಜನರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷ ಮತು ್ತಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸೋಣಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಕರೀಂ ಏಳಾಪುರ, ಪ್ರಕಾಶ ಆಯತವಾಡ, ಅಮೋಘಿ ಗೌಡನವರ, ಮುರಿಗೆಪ್ಪ ಅಕ್ಕಿ, ಈರನಗೌಡ ಬಿರಾದಾರ, ಕಾಸು ಡೆಂಗಿನವರ, ಅನೀಲ ಕಾಂಬಳೆ, ಅಶೋಕ ರುದ್ರಗೌಡರ, ಅಮಗೊಂಡಗೌಡ ಪಾಟೀಲ, ಜೆ.ಎಂ. ಪಾಟೀಲ, ಎಂ.ಎಸ್. ಲೋಣಿ, ಶಂಕರ ಚಿನಗುಂಡಿ, ಸುಭಾಷ ಪಾಟೀಲ, ಮಧುಗೊಂಡ ಬಿರಾದಾರ. ರಾಜು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.