ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು :ಜು;11 ನಾವು ಯಾವುದೇ ವರ್ಗದವರಲ್ಲಾಗಲೀ ನಮ್ಮಕೆಲಸವನ್ನುನಿಷ್ಠೆಯಿಂದ ಮಾಡಬೇಕೆ ಹೊರತು ಯಾರೋ ಬಂದು ನಮ್ಮನ್ನು ಪ್ರಶ್ನಿಸುತ್ತಾರೆ ಎನ್ನುವ ದೃಷ್ಟಿಯಿಂದ ಕೆಲಸ ಮಾಡಬಾರದು ಕಚೇರಿಗೆ ಯಾರು ಬಂದು ದೂರನ್ನು ನೀಡಲು ಅಥವಾ ಮಾಹಿತಿ ಕೇಳಲು ಬಂದರೆ ಅವರ ಮಾತನ್ನು ಆಲಿಸಿ ಕೇಳಲು ಬಂದವರಿಗೆ ಮಾಹಿತಿಯನ್ನು ಒದಗಿಸಿ ನಂತರ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು ಎಂದು ಸುಪರಿಟೆಂಡ್ ಆಫ್ ಪೊಲೀಸ್ ಅಧಿಕಾರಿ ಎಮ್.ಎಸ್. ಕೊಲ್ಲಾಪುರಿ ಅವರು ಅಧಿಕಾರಿಗಳಿಗೆ ಚಾಟಿ ಬೀಡುವ ಮೂಲಕ ಎಚ್ಚರಿಕೆ ನೀಡಿದರು.
ಅವರು ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಕರೆದು ಕುಂದು ಕೊರತೆ ಹಾಗೂ ಆಹ್ವಾನಗಳನ್ನು ಸ್ವೀಕರಿಸಿ ಸಾರ್ವಜನಿಕರೊಮದಿಗೆ ಪರಸ್ಪರ ಚರ್ಚೆ ನಡೆಸಿದರು. ಅವರು ಮುಂದು ವರೆದು ಸಾರ್ವಜನಿಕರಿಗೆ ಅಗತ್ಯ ಮಾಹತಿಇಗಳನ್ನು ಲಭ್ಯವಾಗುವಂತೆ ಕಾರ್ಯನಿರ್ವಹಿಸಬೇಕೆಂದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಖಾಜಾ ಎಂ. ಅರಣ್ಯ ವಲಯ ಅಧಿಕಾರಿ ಉಮೇಶ್ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕೃಷ್ಣಾ ನಾಯಕ ಗಣಿ ಮತ್ತು ಭೂ ವಿಜ್ಞಾನಿಲಾಖೆ ಅಧಿಕಾರಿ ಪರಿಸರ ನಿಯಂತ್ರಣ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಎಳೆ ನಾಗಪ್ಪ ಸೇರಿದಂಎತ ಇತರೆ ಅಧಿಕಾರಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಸರ್ಕಾರಿ ಕಚೇರಿ ಗಳಲ್ಲಿ ಅಕ್ರಮ ಅವ್ಯವಹಾರ, ವಿಳಂಬ ಕಂಡು ಬಂದಲ್ಲಿ ಈ ವಿಚಾರದ ಬಗ್ಗೆ ದೂರವಾಣಿ ಅಥವಾ ಪತ್ರದ ಮೂಲಕ ದೂರುಗಳನ್ನು ನೀಡಲು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈ. ಎಸ್.ಪಿ. ರಾಮರಾವ್ ಲೋಕಾಯುಕ್ತ ಪಿ.ಎಸ್.ಐ. ರಫಿಕ್ ಸಂಡೂರಿನ ತಹಶೀಲ್ದಾರ್ ಶಾಂತಲಾ ಚಂದನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.