ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಕೂಡ್ಲಿಗಿ.ಏ.4:-ಅಧಿಕಾರಿಗಳು ತಾಲೂಕಿನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸಿ ಬರೀ ಭಾಷಣದಿಂದ ಯಾವುದೇ ಪ್ರಯೋಜನವಾಗದು ಸಾರ್ವಜನಿಕ ಸೇವೆಗೆ ಮುಂದಾಗಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ತಾಲೂಕಿನ ಅಧಿಕಾರಿಗಳಿಗೆ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತಿನ ಚಾಟಿ ಬೀಸಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇಶದಲ್ಲಿ ಕೊರೋನಾ ಮಹಾಮಾರಿಯ ಎರಡನೇ ಅಲೆ ಜೋರಾಗಿದ್ದು ಇದರ ನಿಯಂತ್ರಣಕ್ಕೆ ಕೋವಿಡ್ ಲಸಿಕೆ 45ವರ್ಷ ಮೇಲ್ಪಟ್ಟವರಿಗೆ ಹಾಕುವುದರಿಂದ ನಿಯಂತ್ರಣವಾಗಬಲ್ಲದು ನಾನು ಸಹ ಲಸಿಕೆ ಹಾಕಿಸಿಕೊಂಡಿದ್ದೇನೆ ನೀವು ಎಷ್ಟು ಮಂದಿ ಅಧಿಕಾರಿಗಳು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದಾಗ ಇನ್ನು ಕೆಲವರು ಲಸಿಕೆ ಹಾಕಿಸಿಕೊಳ್ಳದೆ ಇರುವವರು ತಪ್ಪದೆ ಹಾಕಿಸಿಕೊಳ್ಳಿ ನೀವೇ ಹಾಕಿಸಿಕೊಳ್ಳದಿದ್ದರೆ ಇನ್ನೊಬ್ಬರಿಗೆ ಹೇಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿರಿ ಎಂದು ತಿಳಿಸಿದರು. ತಾಲೂಕಿನಲ್ಲಿ ಕೋವಿಡ್ ಲಸಿಕೆ ಹಾಕುವ ಬಗ್ಗೆ ಯಾವ ಮಾರ್ಗಸೂಚಿ ಕೈಗೊಂಡಿದ್ದೀರಿ ಇಲ್ಲಿವರೆಗೂ ಎಷ್ಟು ಲಸಿಕೆ ಹಾಕಿದ್ದೀರಿ ಎಂದು ಟಿಹೆಚ್ ಓ ಡಾ.ಷಣ್ಮುಖನಾಯ್ಕ್ ರನ್ನು ಶಾಸಕರು ಪ್ರಶ್ನಿಸಿದರು. ಉಧ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ ಅಧಿಕಾರಿಗಳು ಗ್ರಾಮೀಣ ಭಾಗದ ರೈತರಿಗೆ, ಕೂಲಿಕಾರ್ಮಿಕರಿಗೆ ಉಧ್ಯೋಗ ನೀಡುವುದರ ಮೂಲಕ ಮಾನವೀಯತೆ ಮರೆಯಬೇಕು. ಖಾತ್ರಿ ಯೋಜನೆಯಡಿ ಮೀಸಲಿಟ್ಟ ಹಣ ತಾಲೂಕಿನಲ್ಲಿ ಝೀರೋ ಆಗಬೇಕು ಆ ರೀತಿ ಅಽಕಾರಿಗಳು ಆಯಾ ಇಲಾಖೆಗೆ ಬಂದ ಅನುದಾನವನ್ನು ಜನತೆಗೆ ಕೂಲಿ ನೀಡುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕೂಡ್ಲಿಗಿ ತಾಲೂಕಿನಲ್ಲಿರುವ ಅಲೆಮಾರಿ ಕುಟುಂಬಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ಮುಂಜೂರು ಮಾಡಿಸಿದ್ದು ಬಿಸಿಎಂ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳು ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು, ನಿವೇಶನ ಇದ್ದವರಿಗೆ ಮನೆ ಕಟ್ಟಿಸಿಕೊಡಲು ಅಽಕಾರಿಗಳು ಮುಂದೆ ಬರಬೇಕು ಈ ಬಗ್ಗೆ ವಾರದೊಳಗೆ ಫಲಾನುಭವಿಗಳ ಸ್ಥಿತಿಗತಿಗಳ ಬಗ್ಗೆ ಪಟ್ಟಿ ಮಾಡಿ ಅಲೆಮಾರಿಗಳಿಗೆ ಆಶ್ರಯ ನೀಡಲು ಮುಂದಾಗಬೇಕೆಂದು ಬಿಸಿಎಂ ಅಧಿಕಾರಿ ಪಂಪಾಪತಿಯವರಿಗೆ ಶಾಸಕರು ನಿರ್ಧೇಶನ ನೀಡಿದರು.
3 ಕೋಟಿ ವೆಚ್ಚದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಃ ಕೂಡ್ಲಿಗಿಯಲ್ಲಿ ಸರ್ಕಾರಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 3 ಕೋಟಿ ಹಣ ಮುಂಜೂರಾಗಿ ವರ್ಷಗಳೇ ಗತಿಸಿದರೂ ಅಧಿಕಾರಿಗಳು ನಿವೇಶನ ಇಲ್ಲ ಎನ್ನುವ ಸಬೂಬು ಹೇಳುತ್ತಿರುವುದು ನ್ಯಾಯೋಚಿತವಲ್ಲ, ಎನ್.ಎ. ಸೈಟ್ ಗಳಲ್ಲಿ ಪಾರ್ಕ್ ಗೆ ಬಿಡುವ ನಿವೇಶನದಲ್ಲಿಯೇ ಮಕ್ಕಳ ಆಸ್ಪತ್ರೆ ನಿರ್ಮಿಸಿ ಪಾರ್ಕ್ ನಿರ್ಮಿಸಬೇಕೆಂದು ನಿಯಮ ಇಲ್ಲ ನಾಗರೀಕ ಸೌಲಭ್ಯಗಳಿಗೆ ಮೀಸಲು ಎಂದು ಸರ್ಕಾರ ಹೇಳಿದ್ದರಿಂದ ಮಕ್ಕಳ ಆಸ್ಪತ್ರೆ ನಿರ್ಮಾಣ ಸಹ ನಾಗರೀಕ ಸೌಲಭ್ಯಗಳಲ್ಲೊಂದಾಗಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇನೆ ನಿವೇನು ಭಯಪಡುವುದು ಬೇಡ ಆದಷ್ಟು ಶೀಘ್ರ ಕೂಡ್ಲಿಗಿಯಲ್ಲಿ ಮಕ್ಕಳ ಆಸ್ಪತ್ರೆಗೆ ನಿವೇಶನ ಗುರುತಿಸಿ ಎಂದು ಮುಖ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
14ನೇ ಹಣಕಾಸಿನಲ್ಲಿ ಕುಡಿಯುವ ನೀರಿಗೆ ಶೇಕಡ 50 ಹಣ ಬಳಸಲು ಸೂಚನೆಃ ಬೇಸಗೆ ಆರಂಭವಾಗಿದೆ ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಲಿದೆ ಈಗಾಗಿ ಗ್ರಾಮ ಪಂಚಾಯ್ತಿಗೆ 14ನೇ ಹಣಕಾಸು ಯೋಜನೆಯಲ್ಲಿ ಬಂದ ಹಣದಲ್ಲಿ ಶೇಕಡ 25ರಷ್ಟು ಹಣವನ್ನು ಕುಡಿಯುವ ನೀರಿಗೆ ಬಳಸಬಹುದು ಉಳಿದಂತೆ ನೈರ್ಮಲ್ಯ ಮುಂತಾದ ಕಾರ್ಯಗಳಿಗೆ ಬಳಸಬಹುದು ಎಂದು ತಾ.ಪಂ.ಇಓ ಬಸಣ್ಣ ಶಾಸಕರಿಗೆ ತಿಳಿಸಿದಾಗ ಕುಡಿಯುವ ನೀರಿಗೆ ಶೇಕಡ 25 ಸಾಕಾಗುವುದಿಲ್ಲ ಶೇಕಡ 50 ಹಣ ಬಳಸಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬರದ ಹಾಗೇ ನೋಡಿಕೊಳ್ಳಿ, ಈ ಬಗ್ಗೆ ಕಾನೂನು ತೊಡಕು ಬಂದರೆ ನಾನೇ ಸಿಇಓಗೆ ಪತ್ರ ಬರೆದು ಶೇಕಡ 50ಹಣ ನೀಡುವಂತೆ ತಿಳಿಸುತ್ತೇನೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಇಓಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಪ್ರಗತಿವರದಿಯನ್ನು ಪರಿಶೀಲಿಸಿದರು. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ಅಧಿಕಾರಿಗಳಿಗೆ ಮಾತಿನ ಚಾಟಿ ಮೂಲಕ ಕೆಲಸ ಮಾಡುವಂತೆ ಬಿಸಿ ಮುಟ್ಟಿಸಿದರು.ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಕಾಮಗಾರಿ ಮಾಡಿದ ನಿರ್ಮಿತಿ ಕಾಮಗಾರಿ ಬಗ್ಗೆ ಶಾಸಕರು ಬೇಸರವ್ಯಕ್ತಪಡಿಸಿದರು. ತಾ.ಪಂ.ಇಓ ಬಸಣ್ಣ, ತಹಶೀಲ್ದಾರ್ ಮಹಾಬಲೇಶ್ವರ, ಜಿ.ಪಂ.ಎಇಇ ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆಯ ಜೆಇ ನಾಗನಗೌಡ, ಕೃಷಿ ಇಲಾಖೆಯ ಕೆ.ವಾಮದೇವ, ಗುಡೇಕೋಟೆ ಅರಣ್ಯಾಧಿಕಾರಿ ರೇಣುಕಾ, ಕೂಡ್ಲಿಗಿ ಅರಣ್ಯಾಧಿಕಾರಿ ಮಂಜುನಾಥ, ಬಿಸಿಎಂ ಅಧಿಕಾರಿ ಪಂಪಾಪತಿ, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.