ಪ್ರಾಮಾಣಿಕತೆ ಮೆರೆದ ೧೦೮ ವಾಹನದ ಸಿಬ್ಬಂದಿ

ರಾಯಚೂರು, ಜೂ.೧೧- ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಗಾಯಳುವಿನಲ್ಲಿದ ೪೧೦೦೦ರೂಪಾಯಿ ಹಣ ಮತ್ತು ಮೊಬೈಲ್ ಫೋನ್ ಅವರ ಕುಟುಂಬಕ್ಕೆ ನೀಡುವ ಮೂಲಕ,೧೦೮ ಆರೋಗ್ಯ ಕವಚ ಸಿಬ್ಬಂದಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.
ಬೈಕ್ ಸವಾರ ಸಿಂಧನೂರು ನಿಂದ ರಾಯಚೂರು ಗೆ ಬರುತ್ತಿರುಗ ಮಾನ್ವಿ ರೋಡ್ ಸಾಥ್ ಮೈಲ್ ಹತ್ತಿರ ಬೆಳಗಿನ ಜಾವಾ ೫:೩೦ ಬೈಕ್ ಸವಾರ ಎಮ್ಮೆಗೆ ಡಿಕ್ಕಿ ಒಡೆದ ಪರಿಣಾಮ ಕಳಪ್ಪ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆರೋಗ್ಯ ಕವಚ ೧೦೮ ವಾಹನದಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಥಮ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಕಳಪ್ಪ ಹತ್ತಿರ ೪೧೦೦೦ ರೂಪಾಯಿಗಳು ಒಂದು ಫೋನ್,೧೦೮ ವಾಹನದ ಸಿಬ್ಬಂದಿ, ಈ.ಎಂ.ಟಿ ವಿಶ್ವನಾಥ್ ಚಾಲಕ ಹುಸೈನ್ ಸಬ್, ಹಣ ಫೋನ್ ಕಾಳಪ್ಪ ಕುಟುಂಬಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.