ಪ್ರಾಮಾಣಿಕತೆ ಮೆರೆದ ಪರಮೇಶ್ವರ

ಕಲಬುರಗಿ,ಫೆ.20-ರಸ್ತೆಯಲ್ಲಿ ಬಿದ್ದಿದ್ದ 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಬೋರಮಳ ಸರವನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವುದರ ಮೂಲಕ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸೇಡಂ ತಾಲ್ಲೂಕಿನ ಕೊಂಕನಳ್ಳಿಯ ಸದ್ಯ ಕಲಬುರಗಿ ಜಾಗೃತಿ ಕಾಲೋನಿಯಲ್ಲಿ ವಾಸವಾಗಿರುವ ಪರಮೇಶ್ವರ ಶಿವಲಿಂಗಪ್ಪಾ ಪಾಟೀಲ ಅವರೇ ಪ್ರಾಮಾಣಿಕತೆಯನ್ನು ಮೆರೆದವರು.
ಪರಮೇಶ್ವರ ಅವರು ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ತೋಳವಾಡಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ 500 ಮೀಟರ್ ಅಂತರದಲ್ಲಿ ರಸ್ತೆ ಮಧ್ಯದಲ್ಲಿ ಬಂಗಾರದ ಬೋರಮಳ ಸರ ದೊರೆತಿದೆ. ಬೋರಮಳ ಸರವನ್ನು ಅವರು ಪಂಚರ ಸಮಕ್ಷಮ ಆಳಂದ ಸಿಪಿಐ ಕಚೇರಿಗೆ ತಂದು ಒಪ್ಪಿಸುವುದರ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪರಮೇಶ್ವರ ಅವರ ಪ್ರಾಮಾಣಿಕತೆಯನ್ನು ಎಸ್‍ಪಿ ಶ್ಲಾಘಿಸಿದ್ದಾರೆ.
ಯಾರಾದರೂ ಬೋರಮಳ ಸರ ಕಳೆದುಕೊಂಡಿದಲ್ಲಿ ಆಳಂದ ವೃತ್ತ ಕಚೇರಿ (ಸಿಪಿಐ ಕಚೇರಿ)ಗೆ ಸಂಪರ್ಕಿಸಲು ಕೋರಲಾಗಿದೆ.