ಪ್ರಾಧ್ಯಾಪಕ ವೃತ್ತಿ ತಪಸ್ಸು ಇದ್ದಂತೆ

ಧಾರವಾಡ,ಮಾ 6: ಪ್ರಾಧ್ಯಾಪಕ ವೃತ್ತಿಒಂದುತಪಸ್ಸುಇದ್ದಂತೆ. ಅದಕ್ಕೆ ಸ್ವಪ್ರತಿಭೆ, ಸತತಾಭ್ಯಾಸ, ಕರ್ತವ್ಯ ಪ್ರಜ್ಞೆಅಗತ್ಯಎಂದು ಹಿರಿಯ ವಿದ್ವಾಂಸರಾದಡಾ.ಶಾಂತಿನಾಥ ದಿಬ್ಬದಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಬಿ. ವ್ಹಿ. ಶಿರೂರ ದತ್ತಿ ಉದ್ಘಾಟಿಸಿ ಮತ್ತು ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಡಾ. ಬಿ.ವ್ಹಿ. ಶಿರೂರ ಈ ನಾಡಿನಒಬ್ಬ ಶ್ರೇಷ್ಠ ಸಂಶೋಧಕರು. ತಮ್ಮಅಪಾರಜ್ಞಾನದ ಬಲದಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ತೋರಿಸಿದರು. ಸಂಶೋಧನಾಕ್ಷೇತ್ರವೆಂದರೆಅದೊಂದುದುರ್ಗಮ ಹಾದಿ.ಅವರುಅಪಾರ ಶ್ರಮ ಹಾಗೂ ಛಲದಿಂದ ಸಂಶೋಧನಾಕ್ಷೇತ್ರಕ್ಕೊಂದು ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದವರು.ಅವರು ಕೇವಲ ಅಲ್ಪಕಾಲಾವಧಿಯಲ್ಲಿ 8 ಕೃತಿ ರಚಿಸಿ ಏಕಕಾಲದಲ್ಲಿ ಬಿಡುಗಡೆಗೊಳಿಸುವುದು ಸಾಮಾನ್ಯ ಕೆಲಸವಲ್ಲಎಂದರು.
ಹಿರಿಯ ಸಂಶೋಧಕರಾದ ಶ್ರೀಮತಿ ಹನುಮಾಕ್ಷಿ ಗೋಗಿ ಅವರುಒಬ್ಬ ಶ್ರೇಷ್ಠ ಶಾಸನ ಶಾಸ್ತ್ರಜ್ಞರು.ಅವರು ವೃತ್ತಿಯಿಂದ ಸಹಕಾರಕ್ಷೇತ್ರದಅಧಿಕಾರಿಯಾಗಿದ್ದರೂ ಪ್ರವೃತ್ತಿಯಿಂದ ಶಾಸನ ಕ್ಷೇತ್ರದಲ್ಲಿಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಸಹ ಮಾಡದಕಾರ್ಯ ಮಾಡಿದ್ದು ಅವಿಸ್ಮರಣೀಯಎಂದು ಹೇಳಿದರು.
ಡಾ. ಬಿ. ವ್ಹಿ. ಶಿರೂರ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಶ್ರೀಮತಿ ಹನುಮಾಕ್ಷಿ ಗೋಗಿ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಪ್ರಶಸ್ತಿಗಳು ತಮ್ಮ ಪಾವಿತ್ರ್ಯತೆ ಕಳೆದುಕೊಂಡಿವೆ. ನನಗೆ ಈ ಪ್ರಶಸ್ತಿ ಬಯಸದೇ ಬಂದ ಭಾಗ್ಯವಾಗಿದೆ.ಸೃಜನಶೀಲ ಸಾಹಿತ್ಯಕ್ಕೆ ಸಿಗುವಷ್ಟು ಗೌರವ ಸೃಜನೇತರ ಸಾಹಿತ್ಯಕ್ಕೂ ಸಿಗದಿರುವುದು ಆತಂಕಕಾರಿಯಾಗಿದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ವಿದ್ವಾಂಸರಾದಡಾ. ವೀರಣ್ಣರಾಜೂರ ಮಾತನಾಡಿ, ಡಾ. ಬಿ. ವ್ಹಿ. ಶಿರೂರ ಹಾಗೂ ನನಗೂ ಅವಿನಾಭಾವ ಸಂಬಂಧವಿದೆ.ಶಿರೂರ ಅವರು ಪಾಂಡಿತ್ಯ ಪರಂಪರೆಯಕೊನೆಯಕೊಂಡಿ.ಅವರೊಬ್ಬ ಸ್ಥಿತಪ್ರಜ್ಞರು.ಅವರು ಅನೇಕ ಅಗ್ನಿದಿವ್ಯದಾಟಿ ಬಂದು, ಸಂಶೋಧನಾಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.ಅವರಅಪಾರ ಸಂಖ್ಯಾ ಶಿಷ್ಯ ಬಳಗವೇ ಇದಕ್ಕೆ ಸಾಕ್ಷಿಎಂದು ಹೇಳಿದರು.