ಪ್ರಾಧ್ಯಾಪಕಿ ಲತಾಗೆ ಡಾಕ್ಟರೇಟ್

ದಾವಣಗೆರೆ.ನ.೨೫; ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಲತಾ ಎಸ್, ಎಂ. ಇವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ. ಡಾಕ್ಟರೇಟ್‌ ನೀಡಿ ಗೌರವಿಸಿದೆ.  ಕರ್ನಾಟಕ ವಿ.ವಿ ಯ ಸಮಾಜಶಾಸ್ತ್ರ ಪ್ರಾದ್ಯಾಪಕರು ಮತ್ತು ಸಮಾಜ ವಿಜ್ಙಾನ ನಿಕಾಯದ ಡೀನರು ಆಗಿರುವ ಡಾ, ಶಕುಂತಲ  ಸಿ  ಶೆಟ್ಟರ್‌ ರವರ  ಮಾರ್ಗದರ್ಶನದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಾಂಸ್ಕೃತಿಕ  ಹೊಂದಾಣಿಕೆಗೆ ಸಂಬಂದಿಸಿದಂತೆ  “ ಕಲ್ಚರಲ್‌ ಅಡ್ಜಸ್ಟ್‌ ಮೆಂಟ್‌ ಅಮಂಗ್‌ ಫಾರೆನ್‌ ಸ್ಟುಡೆಂಟ್ಸ್‌ ಇನ್‌ ಕರ್ನಾಟಕ : ಎ ಸೋಶಿಯಾಲಾಜಿಕಲ್‌ ಸ್ಟಡಿ” ಎಂಬ ವಿಷಯದ ಕುರಿತು ಅವರು ಮಹಾ ಪ್ರಭಂಧ ಮಂಡಿಸಿದ್ದಾರೆ.