ಕೋಲಾರ,ಜೂ,೨:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ ಹಾಗೂ ಸಸ್ಯಶಾಸ್ತ್ರ ವಿಭಾಗದ ಡಾ.ಅಬ್ದುಲ್ ಖಯ್ಯೂಂ ಅವರ ಫಂಡಮೆಂಟಲ್ಸ್ ಆಫ್ ಬಾಟನಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಗಂಗಾಧರ್‌ರಾವ್ ಮಾತನಾಡಿ, ವಿದ್ಯೆಯೆಂಬುವ ಜ್ಞಾನವು ದಿವ್ಯ ಅಸ್ತ್ರದ ರೂಪದಲ್ಲಿ ವಿದ್ಯಾರ್ಥಿನಿಯರಿಗೆ ನೀಡಿದ್ದಾರೆ ಎಂದು ಹೇಳಿದರು.ನಿವೃತ್ತಿ ಹೊಂದುತ್ತಿರುವ ಕನ್ನಡ ವಿಭಾಗದ ಪ್ರೊ.ರವೀಂದ್ರ ಮತ್ತು ಸಸ್ಯಶಾಸ್ತ್ರ ವಿಭಾಗದ ಡಾ.ಅಬ್ದುಲ್ ಖಯ್ಯೂಂ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಬೃಂದಾದೇವಿ, ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ನೂರ ಅಹ್ಮದ್, ಗಂಗರಾಜ್, ಡಾ. ರಮೇಶ್, ಪ್ರಕಾಶ್, ಮುನಿರಾಜು, ಮಂಜುಳಾ, ಮಂಜುನಾಥ್, ಮುರಳೀಧರ್, ಅರಿವು ಶಿವಪ್ಪ ಸೇರಿದಂತೆ ಎಲ್ಲಾ ಪ್ರಾಧ್ಯಾಪಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.