ಪ್ರಾಧ್ಯಾಪಕರಿಗಾಗಿ ಆನ್ ಲೈನ್ ಕಾರ್ಯಾಗಾರ

ದಾವಣಗೆರೆ.ನ.21;  ರಾಜ್ಯದ ಪದವಿ ಕಾಲೇಜುಗಳಲ್ಲಿ ನೂತನವಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಹೆಚ್ಚು ಕೌಶಲ್ಯಗಳಿಂದ ಕೂಡಿದ್ದು ಕೌಶಲಾಧಾರಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ  ಅನಿತಾ ಎಚ್ ಎಸ್  ಅಭಿಪ್ರಾಯಪಟ್ಟರು .ಅವರು  ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ವೇದಿಕೆ ವತಿಯಿಂದ  ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರಿಗೆ ಆಯೋಜಿಸಿದ್ದ 
ಆನ್ ಲೈನ್ ಕಾರ್ಯಾಗಾರದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆಗೆ ಅವಕಾಶವನ್ನು ಕಲ್ಪಿಸಿದೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಅಥವಾ ಇಚ್ಛೆ ಪಡುವ ಯಾವುದೇ ವಿಷಯವನ್ನು ಕಲಿಯಲು ಹೊಸ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ ಈ ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಈ ರೀತಿ ಅವಕಾಶ ನೀಡಿರಲಿಲ್ಲ ಒಬ್ಬ ವಿದ್ಯಾರ್ಥಿ ತಾನು ಬಯಸಿದರೆ ಯಾವುದೇ ವಿಷಯವನ್ನು ಎಲ್ಲಿಯಾದರೂ ಕಲಿಯಬಹುದು ಎಂಬುದನ್ನು ಶಿಕ್ಷಣ ನೀತಿ ಹೇಳುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕೌಶಲ್ಯಗಳನ್ನು ಕಲಿಕೆ ಮೂಲಕ ವೃದ್ಧಿಸಿಕೊಂಡು ಮುಂದಿನ ದಿನಗಳಲ್ಲಿ ಒಳ್ಳೆ  ಕಡೆಗೆ ಉದ್ಯೋಗ ಪಡೆದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವೇದಿಕೆ ಕಾರ್ಯದರ್ಶಿಯಾದ  ವೆಂಕಟೇಶ್ ಬಾಬು  ಪ್ರಾಸ್ತಾವಿಕವಾ ಮಾತನಾಡುತ್ತ ಹೊಸ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ವಿವಿಧ ಕಾಲೇಜಿನ ಪ್ರಿನ್ಸಿಪಾಲರಲ್ಲಿ ಅಧ್ಯಾಪಕರಲ್ಲಿ ತುಂಬಾ ಗೊಂದಲಗಳಿದ್ದವು  ಅದನ್ನು ಪರಿಹರಿಸಲೆಂದೇ ಈ ತರಹದ ಕಾರ್ಯಕ್ರಮವನ್ನು ಆಯೋಜಿಸಿ ಅಧ್ಯಾಪಕರ ಗೊಂದಲಗಳನ್ನು ಬಗೆ ಹರಿಸುವಲ್ಲಿ  ವೇದಿಕೆಯು ಪ್ರಯತ್ನ ಪಡುತ್ತಿದೆ. ವೇದಿಕೆಯ ಮೂಲಕ ಇನ್ನು ಮುಂದೆ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸುವ ಆಲೋಚನೆ ಇದ್ದು ಆದಷ್ಟು ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಹಾಗೂ ಗೊಂದಲಗಳಿಲ್ಲದೆ ಜಾರಿಗೆ ತರುವುದನ್ನು ವೇದಿಕೆ ಸ್ವಾಗತಿಸುತ್ತದೆ ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವೇದಿಕೆಯು ಅದಕ್ಕೆ ಸ್ಪಂದಿಸುತ್ತದೆ ಎಂದು ಹೇಳಿದರು .ಕಾರ್ಯಕ್ರಮದಲ್ಲಿ  ವೇದಿಕೆಯ ಗೌರವಾಧ್ಯಕ್ಷ ಡಾ. ರವಿ ಎಸ್ಪಿ  ನಿವೃತ್ತ ಪ್ರಾಂಶುಪಾಲ ಪ್ರೊ ರಾಮರಾವ್ ಹಾಗೂ ವೇದಿಕೆ ಎಲ್ಲಾ ಪದಾಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ  ಕಾಲೇಜುಗಳಿಂದ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಎಲ್ಲ ಬೋಧಕರು ಭಾಗವಹಿಸಿದ್ದರು.