ಪ್ರಾದೇಶಿಕ ಸಿನಿಮಾಗಳಿಗೆ ಚಿತ್ರೋತ್ಸವ ಉತ್ತಮ ವೇದಿಕೆ: ಅನುರಾಗ್ ಠಾಕೂರ್

ಪಣಜಿ,ನ.20-ಪ್ರಾದೇಶಿಕ ಸಿನಿಮಾ ಮತ್ತು ಬೇರೆಲ್ಲೂ ವೇದಿಕೆ ಸಿಗದ ಇತರರ ಭಾಷೆಯ ಸಿನಿಮಾಗಳಿಗೆ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವ ಉತ್ತಮ ವೇದಿಕೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಇಂಗ್ ಠಾಕೂರ್ ಇಂದಿಲ್ಲಿ ಹೇಳಿದ್ದಾರೆ.

ಚಿತ್ರೋತ್ಸವ ಮೂಲಕ ಪ್ರಪಂಚದ ಮೂಲೆ ಮೂಲೆಗಳನ್ನು ತಲುಪಬಹುದು. ಜೊತೆಗೆ ಚಿತ್ರೋತ್ಸವ ವಿತರಕರು ಮತ್ತು ನಿರ್ಮಾಪಕರಿಗೆ ಉತ್ತಮ ಮಾರುಕಟ್ಟೆಯಾಗಿದೆ ಎಂದು ತಿಳಿಸಿದ್ದಾರೆ.

ಪಣಜಿಯಲ್ಲಿ ಇಂದಿನಿಂದ ಆರಂಭವಾಗಿರುವ 53ನೇ ಆವೃತ್ತಿಯ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚಿತ್ರೊತ್ಸವವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದು ಭಾರತೀಯ ಚಿತ್ರೋದ್ಯಮಕ್ಕೆ ಅವರು ಮನವಿ ಮಾಡಿದ್ದಾರೆ.

ಭಾರತೀಯ ಸಿನಿಮಾ ಇದೀಗ ಪ್ರಪಂಚದ ಅತಿ ದೊಡ್ಡ ಹಬ್ ಆಗಿ ಮಾರ್ಪಟಾಗವ ಎಲ್ಲಾ ಲಕ್ಷಣಗಳೂ ಇವೆ, ಚಿತ್ರೋದ್ಯಮದ ಮೂಲಕ ದೇಶ ವಿದೇಶಗಳ ಚಿತ್ರಗಳು ಪರಸ್ಪರ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತೀಯಚಲನಚಿತ್ರೋದ್ಯಮ ಉತ್ತಮ ಚಿತ್ರೀಕಣ ತಾಣಗಳು, ಅತ್ಯುತ್ತಮ ಪ್ರತಿಭೆಗಳು, ಅವರಿಗೆ ಅಗತ್ಯವಿರುವ ಪ್ರೋತ್ಸಾಹ ಸೇ ಎಲ್ಲವನ್ನೂ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಚಿತ್ರೋತ್ಸವಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪೆÇ್ರೀತ್ಸಾಹ ಮತ್ತು ಸಹಕಾರ ನೀಡುತ್ತಿದೆ.ಚಲನಚಿತ್ರ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಏನು ಬೇಕಾದರೂ ಮಾಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇಂದಿನಿಂದ ಇದೇ 28ರವರೆಗೆ ಚಿತ್ರೋತ್ಸವ ನಡೆಯಲಿದ್ದು ಸಿನಿಮಾ ಆಸಕ್ತಿರಿಗೆ ರಸದೌತಣ ನೀಡಿಲಿದೆ,