
ದಾವಣಗೆರೆ. ಏ.೨೯; ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಆನಂದಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಕ್ಷೇತ್ರ ವ್ಯಾಪ್ತಿಯ ಲೋಕಿಕೆರೆ,ಕೋಡಿಹಳ್ಳಿ ಕ್ಯಾಂಪ್,ಕೋಡಿಹಳ್ಳಿ, ಶ್ಯಾಗಲೆ, ಬಾಡ, ಕಾಶಿಪುರ,ಮಳಲ್ಕೆರೆ,ಕಂದಗಲ್ಲು,ದ್ಯಾಮೇನಹಳ್ಳಿ,ರಾಮಗೊಂಡನಹಳ್ಳಿ, ಅತ್ತಿಗೆರೆ,ಕಾಶೀಪುರ ಕ್ಯಾಂಪ್ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.ನಂತರ ಮಾತನಾಡಿದ ಅವರು ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರ ಅಭಿವೃದ್ಧಿ ಯೋಜನೆಯ ಕಾರ್ಯಗಳು ಎಲ್ಲಾ ಪಕ್ಷಗಳಿಗೂ ಮಾದರಿಯಾಗಿದೆ.ಇಳಿ ವಯೋಮಾನದಲ್ಲೂ ಕೂಡ ಇಂದಿಗೂ ಪ್ರಾದೇಶಿಕ ಪಕ್ಷದ ಮಹತ್ವ ಸಾರಿದ ದೇವೇಗೌಡರು ಸದಾ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಜನಪರ ಆಲೋಚನೆಗಳು ನನ್ನ ಗೆಲುವಿಗೆ ಕಾರಣವಾಗಲಿದೆ ಎಂದರು.ಪಂಚರತ್ನ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಾದರೆ ಮಾಯಕೊಂಡ ಜನತೆ ಜೆಡಿಎಸ್ ಬೆಂಬಲಿಸಬೇಕು ಎಂದರು.ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.