ಪ್ರಾದೇಶಿಕ ಪಕ್ಷಗಳಿಗೆ ಹರಿದು ಬಂದ ಚುನಾವಣೆ ದೇಣಿಗೆ

ನವದೆಹಲಿ,/ ಹೈದರಾಬಾದ್ ನ.14- ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಚುನಾವಣಾ ದೇಣಿಗೆ ಹರಿದು ಬಂದಿದೆ.

ತೆಲುಗು ದೇಶಂ ಪಕ್ಷ, ಟಿಆರ್ ಎಸ್ ಮತ್ತು ವೈ ಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಅಪರಿಚಿತ ಮೂಲಗಳಿಂದ ಅಪಾರ ಪ್ರಮಾಣದಲ್ಲಿ ಹಣ ಹರಿದುಬಂದಿದೆ.

2019-20 ರಲ್ಲಿ ಮೂರು ರಾಜಕೀಯ ಪಕ್ಷಗಳಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 455 ಕೋಟಿಗೂ ಹೆಚ್ಚಿನ ಅನುದಾನ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮೂರು ರಾಜಕೀಯ ಪಕ್ಷಗಳಿಗೆ ಸರಿಸುಮಾರು ನೂರಾರು ಕೋಟಿಗೂ ಹೆಚ್ಚಿನ ಮೊತ್ತದ ಹಣ ಹರಿದು ಬಂದಿದೆ.ಅದರಲ್ಲಿ ಟಿಆರ್ ಎಸ್ ಪಕ್ಷ ಕ್ಕೆ 89 ಕೋಟಿ ಹರಿದು ಬಂದಿದೆ‌.

ರಾಜಕೀಯ ಪಕ್ಷಗಳಿಗೆ ಯಾವ ಮೂಲದಿಂದ ಹಣ ಬಂದಿದೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಮೂಲಗಳು ಬಹಿರಂಗಪಡಿಸಿಲ್ಲ‌.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಒಟ್ಟಾರೆ 803 ಕೋಟಿ ರೂಪಾಯಿ ಹಣ ಹರಿದು ಬಂದಿದೆ.

ಟಿಆರ್ ಎಸ್ ಗೆ 89 ಕೋಟಿ, ಟಿಡಿಪಿಗೆ 81.6 ಕೋಟಿ ವೈಎಸ್ ಆರ್ ಸಿ ಕಾಂಗ್ರೆಸ್ ಗೆ 74.7 ಕೋಟಿ, ಒರಿಸ್ಸದಲ್ಲಿ ನವೀನ್ ಪಟ್ನಾಯಕ್ ಪಕ್ಷಕ್ಕೆ 50.5, ಹಾಗು ಡಿಎಂಕೆ ಪಕ್ಷಕ್ಕೆ 45.5 ಕೋಟಿ ಹಣ ವಿವಿಧ ಮೂಲಗಳಿಂದ ಹರಿದು ಬಂದಿದೆ.