ಪ್ರಾದೇಶಿಕ ಕಾರ್ಯಕ್ರಮ ಮುಂದುವರಿಸಲು ಒತ್ತಾಯ

ರಾಯಚೂರು, ಏ.೧೨-ಆಕಾಶವಾಣಿಯಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಮುಂಚಿನಂತೆಯೇ ಮುಂದುವರೆಸಬೇಕೆಂದು ವ್ಯಂಗ್ಯ ಚಿತ್ರಕಾರ ಸಾಹಿತಿ, ಈರಣ್ಣ ಬಂಗಾಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಕಾಶವಾಣಿ ಈ ದೇಶದಲ್ಲಿ,ನಾಡಿನಲ್ಲಿ ಬಹುದೊಡ್ಡ ಕೇಳುಗರ ಸಂಖ್ಯೆಯನ್ನು ಹೊಂದಿದೆ ಅಲ್ಲದೇ ಭಾವನಾತ್ಮಕ ಸಂಬಂಧವನ್ನು ಇಲ್ಲಿನ ಜನ ಬೆಳೆಸಿಕೊಂಡಿದ್ದಾರೆ.ಇದಕ್ಕೆಲ್ಲಾ ಕಾರಣ ಮಾಹಿತಿ ಮತ್ತು ಮನರಂಜನೆಯ ಜೊತೆ ಸ್ಥಳೀಯ ಸೊಗಡಿನ ಕಾರ್ಯಕ್ರಮಗಳು ಎಂದೇ ಹೇಳಬಹುದು.ಆದರೆ ಇಷ್ಟರಲ್ಲೇ ಆಕಾಶವಾಣಿಯ ಪ್ರಾದೇಶಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲು ಮತ್ತು ಬೆಂಗಳೂರು ಕೇಂದ್ರಿತ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡಲು ಮುಂದಾಗಿದ್ದಾರೆ . ಇದರಿಂದ ಪ್ರಾದೇಶಿಕ ಕಲೆ , ಸಾಹಿತ್ಯ , ಸಂಸ್ಕೃತಿಯ ಕಾರ್ಯಕ್ರಮಗಳು ಇಲ್ಲದಂತಾಗುತ್ತವೆ ಎಂದು ದೂರಿದರು. ಸ್ಥಳೀಯ ಕಲಾವಿದರಿಗೆ ಮತ್ತು ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಉದ್ಯೋಷಕರು,ತಂತ್ರಜ್ಞರು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.ಪ್ರಸಾರ ಅಧಿಕಾರಿಗಳು ಕಲಾವಿದರನ್ನು ಉಳಿಸುವ ಮೂಲಕ ಸ್ಥಳೀಯ ಭಾಷೆ , ಸಂಸ್ಕೃತಿ , ಜಾನಪರ , ಕಲೆಗಳಿಗೆ ಔತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಮಾನವೀಯತೆ ಕಾರ್ಯಕ್ರಮಗಳನ್ನು ವಿಲೇ ಮಾಡದೇ ಈ ಮುಂಚಿನಂತೆ ಸ್ಥಳೀಯರಿಗೆ ಕಾರ್ಯಕ್ರಮಗಳನ್ನು ಒದಗಿಸುವುದರ ತೋರಬೇಕಿದೆ. ಸ್ಥಳೀಯ ಕಾರ್ಯಕ್ರಮಗಳ ರದ್ದು ಮಾಡುವ ನೆಪದಲ್ಲಿ ಅನೇಕ ಸೇವೆಸಲ್ಲಿಸುವತ್ತಿರುವ ಆಕಾಶವಾಣಿಯ ಸಿಬ್ಬಂದಿ ಕಡಿತವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.