ಪ್ರಾದೇಶಿಕ ಆಯುಕ್ತರಿದ ಮತಗಟ್ಟೆ ಪರಿಶೀಲನೆ

ಸಂಜಯವಾಣಿ ವಾರ್ತೆ
ಚಿಟಗುಪ್ಪ,ಏ.7-ತಾಲೂಕಿನ ಮನ್ನಾ ಎಕ್ಕೇಳಿ ಗ್ರಾಮದಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ವಿವಿಧ ಮತಗಟ್ಟೆಗಳ ಪರಿಶೀಲನೆ ನಡೆಸಿದರು.
ನಂತರ ಮಾತಾಡಿದ ಅವರು, ಮತದಾನದ ದಿನ ಮತದಾರರು ಸರದಿ ಸಾಲಿನಲ್ಲಿ ನಿಂತಾಗ ನೆರಳು ಇರುವಂತೆ ಶಾಮಿಯಾನ್, ಕುಡಿಯುವ ನೀರು, ಅಂಗವಿಕಲರಿಗೆ ಚಕ್ರದ ಕುರ್ಚಿ, ಮತಗಟ್ಟೆ ಅವರಣದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಬಿಎಲ್‍ಓಗಳಾದ ಶಂಕರ್, ಶಿವಕುಮಾರ್, ನಾಗಶೆಟ್ಟಿ, ಕಲ್ಲಪ್ಪ ಅವರು ಮತಗಟ್ಟೆಗಳ ಹಾಗೂ ಮತದಾರರ ಬಗ್ಗೆ ಸಂಖ್ಯವಾರು ಮಾಹಿತಿಯನ್ನು ಅಧಿಕಾರಿಗೆ ನೀಡಿದರು. ಹಾಗೂ ಇದುವರೆಗೆ ಕೈಗೊಂಡ ವ್ಯವಸ್ಥೆ ಕುರಿತು ವಿವರಿಸಿದರು. ತಸಿಲ್ದಾರ್ ರವೀಂದ್ರ ದಾಮ, ಕಂದಾಯ ನಿರೀಕ್ಷಕ ಮಹೇಶ್ ಕುಮಾರ್, ಗ್ರಾಮಲೆಕ್ಕಿಗ ವಿಠಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭಾಗ್ಯ ಜ್ಯೋತಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇತರ ರೂ ಉಪಸ್ಥಿತರಿದ್ದರು.