ಕಲಬುರಗಿ:ಜೂ.14:ಎಐಡಿಎಸ್‍ಓ ಕರ್ನಾಟಕ ರಾಜ್ಯ ಸಮಿತಿ ನಿಯೋಗ ಇಂದು ರಾಜ್ಯ ಸರ್ಕಾರದ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿತು. ರಾಜ್ಯದಲ್ಲಿ ಎನ್‍ಇಪಿ 2020 ಅನುಷ್ಠಾನದ ಹಿನ್ನಲೆಯಲ್ಲಿ, 13,800 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿದ್ದ ಹಿಂದಿನ ಸರ್ಕಾರದ ಆದೇಶವನ್ನು ರದ್ದು ಗೊಳಿಸಬೇಕೆಂದು ಅವರಿಗೆ ಮನವಿ ಮಾಡಲಾಯಿತು.
ಸಾರ್ವಜನಿಕ ಶಿಕ್ಷಣ ಉಳಿಸಲು, ಎನ್‍ಇಪಿ 2020 ಪ್ರತಿರೋಧಿಸಲು ನಮ್ಮ ರಾಜ್ಯದಲ್ಲಿ 35 ಲಕ್ಷ ಸಹಿ ಸಂಗ್ರಹಣೆ ಆದದ್ದನ್ನು ಅವರ ಗಮನಕ್ಕೆ ತಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸುವಂತೆ ಕೋರಲಾಯಿತು. ಅಂತೆಯೇ ಪಠ್ಯ ಕ್ರಮದ ಮೂಲಕ ಶಾಲೆಗಳಲ್ಲಿ ಧರ್ಮ ನಿರಪೇಕ್ಷ ವಾತಾವರಣ ಕಾಪಾಡುವಂತೆ ಮನವಿ ಸಲ್ಲಿಸಲಾಯಿತು.
ಎಲ್ಲಾ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ಎನ್‍ಇಪಿ 2020 ರಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಎಐಡಿಎಸ್‍ಓ ರಾಜ್ಯ ಸಮಿತಿ ಸೆಕ್ರಟೇರಿಯೇಟ್ ಸದಸ್ಯರಾದ ಅಪೂರ್ವ ಹಾಗೂ ಕಲ್ಯಾಣ್ ಅವರು ಪ್ರತಿನಿಧಿಸಿದ್ದರು.