ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಾಗಲಿ


ಸಂಜೆವಾಣಿ ವಾರ್ತೆ
ಸಂಡೂರು :ನ:14 ಸಮಾಜದಲ್ಲಿ ಪ್ರತಿಯೊಂದು ಮಗುವೂ ಸಹ ಉತ್ತಮ ಶಿಕ್ಷಣ ಪಡೆಯಬೇಕು, ಕನ್ನಡ ಮಾತೃಭಾಷೆಯಾಗಿ ಅಭ್ಯಾಸ ಮಾಡುವ ಮೂಲಕ ನಮ್ಮ ಸಂಸ್ಕೃತಿ, ಕಲೆ ಸಾಹಿತ್ಯವನ್ನು ಬಿತ್ತುವಂತಹ ಕಾರ್ಯ ನಡೆಯಬೇಕು ಎಂದು ತಾಲೂಕು ಅಧ್ಯಕ್ಷ ಟಿ. ನರಸಿಂಹ ತಿಳಿಸಿದರು.
ಅವರು ತಾಲೂಕಿನ ವಡ್ಡು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಸಂಡೂರು ತಾಲೂಕು ವಡ್ಡು ಗ್ರಾಮ ಘಟಕದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ 150 ಶಾಲಾ ಮಕ್ಕಳಿಗೆ ಬ್ಯಾಂಗ್ ಮತ್ತು ಪುಸ್ತಕಗಳನ್ನು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬಡ ಮಕ್ಕಳೂ ಸಹ ಉತ್ತಮ ಸೌಲಭ್ಯಗಳೊಂದಿಗೆ ಶಿಕ್ಷಣ ಪಡೆಯಬೇಕು ಎಂದು ಈ ಉತ್ತಮ ಕಾರ್ಯವನ್ನು ಕರ್ನಾಟಕ ರಕ್ಷಣಾವೇದಿಕೆ ಕುಮಾರ್‍ಶೆಟ್ಟಿ ಬಣ ಹಮ್ಮಿಕೊಂಡು ಕನ್ನಡ ಸೇವೆಯನ್ನು ಸದ್ದಿಲ್ಲದೇ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ವಿ.ರಾಮಾಂಜಿನೇಯಲು. ಬಳ್ಳಾರಿ ಜಿಲ್ಲಾ ಅಧ್ಯಕ್ಷರು , ಜಿಲ್ಲಾ ಯುವ ಘಟಕದ ಅಧ್ಯಕ್ಷರು ಕಟೆಸ್ವಾಮಿ, ತಾಲೂಕು ಅಧ್ಯಕ್ಷರು ಟಿ ನರಸಿಂಹ, ವಡ್ಡು ಗ್ರಾಮ ಘಟಕದ ಅಧ್ಯಕ್ಷರು ಜಿ.ಸ್ವಾಮಿ,ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ, ಸುಬನ್ ಸಬ್ ಚನ್ನಪ್ಪ
ಬಿಜೆಪಿ ತಾಲೂಕು ಅಧ್ಯಕ್ಷರು ಜಿಟಿ ಪಪಾಪತಿ, ಕೆ ಎಸ್ ದಿವಕರ್ ಬಿಜೆಪಿ ಮುಖಂಡರು , ಎನ್ ಸೊಮಪ್ಪ ಜೆ ಡಿ ಎಸ್ ತಾಲೂಕು ಅಧ್ಯಕ್ಷರು.. ಗ್ರಾಮ ಪಂಚಾಯತಿ ಸದಸ್ಯರು, ಇವರ ಉಪಸ್ಥಿತಿಯಲ್ಲಿ ನಿವೃತ್ತಿ ಹೊಂದಿರುವ ಶಿಕ್ಷಕರು .ರಘ. ಏ ನಾಗಭೂಷಣ ಇವರಿಗೆ ಸನ್ಮಾನಿಸಲಾಯಿತು
ನಾಗೇಶ ಪಕಿರಪ್ಪ ಮಹೇಶ