ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ

ಸಿರವಾರ,ಆ.೨೮- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ದೇವಪುತ್ರ ಹಾಗೂ ಉಪಾಧ್ಯಕ್ಷರಾಗಿ ಬಸ್ಸಪ್ಪಗೌಡ ನಂದರಡ್ಡಿ ಅವರು ಅವಿರೋಧವಾಗಿ ಆಯ್ಕೆಯಾದರು.
ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಚೆನ್ನೂರು ಚೆನ್ನಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ವ ಸದಸ್ಯರುಗಳ ಒಮ್ಮತದಂತೆ ಅಧ್ಯಕ್ಷರಾಗಿ ದೇವಪುತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಸ್ಸಪ್ಪಗೌಡ ನಂದರಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರಿಗೆ ಎಂ ಆರ್ ಹೆಚ್ ಎಸ್ ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನುಟಗಿ ಹಾಗೂ ಜಯಪ್ಪ ಕೆಂಪು ಸೇರಿದಂತೆ ಇತರರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಂ.ನಾಗರಾಜ ಗೌಡ, ಎನ್ ಪಂಪಣ್ಣ ಸಾಹುಕಾರ, ಚನ್ನೂರ ಚನ್ನಪ್ಪ, ಆಂಜನೇಯ ಬಿಚ್ಚಾಲಿ, ಎಂ ಪ್ರಕಾಶಪ್ಪ, ಮತ್ತಾಯಪ್ಪ, ಮಲ್ಲಪ್ಪ, ಹಾಜಿಮಲಂಗ್, ಇಮಾನುವೆಲ್,ಕಾಶೀರಿಸಾಬ್, ಜಿಂದಾವಲಿ, ಜಯರಾಜ್ ಜಕ್ಕಲದಿನ್ನಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರಿದ್ದರು.