ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುಡ್ಡಪ್ಪ ಅವಿರೋಧವಾಗಿ ಆಯ್ಕೆ


ಸಂಜೆವಾಣಿವಾರ್ತೆ
 ಹರಪನಹಳ್ಳಿ.ಜ.31; ತಾಲೂಕಿನ ಹಲುವಾಗಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಳಿಚೋಡು ಗುಡ್ಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈಶಪ್ಪ ಇವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಳಿಚೋಡು ಗುಡ್ಡಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್.ಬಸವರಾಜ ತಿಳಿಸಿದರು.
ನೂತನ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಿಳಿಚೋಡು ಗುಡ್ಡಪ್ಪ ಅವರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ರೈತರ ಜೊತೆಗೆ ನಿರಂತರ ಸಂಪರ್ಕದಲ್ಲಿರಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಚಿರಸ್ತಹಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಬಸವರಾಜಪ್ಪ, ಉಪಾಧ್ಯಕ್ಷರಾದ ದಿವಾಕರ ಯರಬಾಳು, ನಿರ್ದೇಶಕರಾದ ಎಂ.ಪ್ರಕಾಶ, ಹೆಚ್.ಟಿ.ಗೀರಿಶ್, ಈಶಪ್ಪ, ನೀಲಮ್ಮ, ಬಸವರಾಜ, ಸಿದ್ದಲಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ದ್ಯಾಮಪ್ಪ, ವೀರಭದ್ರಪ್ಪ, ಬಸವರಾಜಪ್ಪ, ಅಜ್ಜಪ್ಪ, ಬಿ.ನಾಗರಾಜ, ಎಂ.ನಾಗರಾಜ, ಟಿ.ಸುರೇಶ, ಅರಸೀಕೆರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಇನಾಯತುಲ್ಲಾ,  ನಿಚ್ಚವ್ವನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ. ಆನಂದ ಮುಖಂಡರಾದ ಅಂಜಿನಪ್ಪ, ಬಿ.ಮಂಜಪ್ಪ, ಸೋಮಶೇಖರ, ಕೆ.ರಾಜಣ್ಣ, ಎಂ.ಜಯಪ್ಪ, ಜನಾರ್ಧನ, ರಾಮಚಂದ್ರಪ್ಪ, ನಾಗರಾಜ, ಹನುಮಂತಪ್ಪ, ಮಾರುತಿ, ಪರಶುರಾಮ ಪಿ, ಇತರರು ಇದ್ದರು.

One attachment • Scanned by Gmail