ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಂಖ್ಯೆ 3023ಕ್ಕೆ ಏರಿಕೆ-ಜೆ.ಎಂ. ಶಿವಪ್ರಸಾದ್


ಸಂಜೆವಾಣಿ ವಾರ್ತೆ
ಸಂಡೂರು:ಸೆ: 22;  ಸಂಘದ 2022-23ನೇ ಸಾಲಿಗೆ ದಿನಾಂಕ: 31.03.2023ಕ್ಕೆ ಒಟ್ಟು ಸದಸ್ಯರ ಸಂಖ್ಯೆ 3023 ಸದಸ್ಯರ ಷೇರು ಬಂಡವಾಳ ಹಾಗೂ ಸರ್ಕಾರದ ಷೇರು ಬಂಡವಾಳ ಒಟ್ಟು 10,28,5859, ಸದಸ್ಯರಿಂದ ವರ್ಷದ ಅಂತ್ಯೆಕ್ಕೆ ಬಂದ ಠೇವಣಿ ಮೊತ್ತ 10,01051, ಕಾರ್ಪೋರೇಷನ್ ಬ್ಯಾಂಕ್ ಕಟ್ಟಡದ ಸಾಲ 9,16,392/- ನಮ್ಮ ಸಂಘದ ಕಟ್ಟಡದ ಚರ ಮತ್ತು ಸ್ಥಿರಾಸ್ತಿ ಮೌಲ್ಯ 6987820/-, ಕೆ.ಸಿ.ಸಿ. ಸಾಲ ವಿತರಣೆ ಸಂಖ್ಯೆ ಸದಸ್ಯರು 909, ಮೊತ್ತ : 67172000/-ಮಾದ್ಯಮಾವಧಿ ಸಾಲ ವಿತರಕರ ಸದಸ್ಯರ ಸಂಖ್ಯೆ: 11, ಮೊತ್ತ 60,3100/- ಷೇರು ಬಂಡವಾಳ, ವಿಧಿಗಳು , ಸರ್ಕಾರದ ಸಾಲ ಹಾಗೂ ಸಹಾಯಧನ  ಬಿಡಿಸಿಸಿ ಬ್ಯಾಂಕ್‍ಗೆ ಕೊಡತಕ್ಕ ಸಾಲ, ಕಾರ್ಪೋರೇಷನ್  ಬ್ಯಾಂಕ್ ಕಟ್ಟಡದ ಸಾಲ, ಸದಸ್ಯರ ಠೇವಣಿ ಇತರರಿಗೆ ಕೊಡತಕ್ಕದ್ದು, ಸಾಲಗಳ ಮೇಲೆ ಬಡ್ಡಿ ಅವಕಾಶ, ಸದಸ್ಯರ ಸಾಲಗಳ ಮೇಲೆ ಎನ್.ಪಿ.ಎ. ಅವಕಾಶ ಒಟ್ಟು 11,90,99,605/- ಜವಾಬ್ದಾರಿಯಾಗಿದ್ದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಎಂ. ಶಿವಪ್ರಸಾದರವರು ತಿಳಿಸಿದರು.
ಅವರು ಸಂಡೂರು ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಇರುವ ವಾಲ್ಮೀಕಿ ಭವನದಲ್ಲಿ 2022-23ನೇ ಸಾಲಿನ ವಆರ್ಷಿಕ ಮಹಾಜನ್ ಸಭೆಯ ವಾರ್ಷಿಕ ವರದಿ ಮಂಡನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಯಲ್ಲಿರುವ ನಗದು ಶಿಲ್ಕು 10,609/-, ಬ್ಯಾಂಕ್ ಖಾತೆಗಳಲ್ಲಿರುವ ಮೊತ್ತ 19,11,885 ಇನ್ನಿತರೇ ಆಸ್ತಿಗಳ ವಿವಿರ ಸೇರ್ಪಡೆಯಾದರೂ 13,78,3177 ನಿವ್ವಳ ಹಾನಿಯಾಗಿದೆ. ಆದರೆ ವಾರ್ಷಿಕವಾಗಿ 3,28,000 ರೂ. ಲಾಭ ಬಂದಿದೆ. ಹಿಂದಿನ ಸಂದರ್ಭದಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದ್ದು ತೀವ್ರ ಕೊರತೆಯನ್ನು ಎದುರಿಸಿತು. ಸರ್ಕಾರದ ಬೈಲಾದ ಪ್ರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾಋ ಸಂಘ ಎನ್ನುವ ಬದಲು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾಋ ಸಂಘ ಎನ್ನುವ ನಾಮಕರಣ ಮಾಡಲಾಗಿದೆ. ಈಗಾಗಲೇ ಸರ್ಕಾರದ ಬೈಲಾ ಪ್ರಕಾರ ಮಹಾಜನ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ 238 ಜನ ಯಶಸ್ವಿನಿ ಕಾರ್ಡ ಲಾಭವನ್ನು ಪಡೆದುಕೊಂಡಿದ್ದಾರೆ. 11 ಸ್ತ್ರೀಶಕ್ತಿ ಗುಂಪಿಗೆ ಸಹಾಯಧನವನ್ನು ನೀಡಲಾಗಿದೆ. ಯಶವಂತನಗರ , ಸುಶೀಲಾನಗರ ಗ್ರಾಮಗಳಲ್ಲಿ ಬೀಜ ಗೊಬ್ಬರ ಮಾರಾಟ ಮಾಡುವುದಕ್ಕೆ ರೈತ ಬಾಂಧವರು ಸಾರ್ವಜನಿಕರು ಜಾಗ ತೋರಿಸಬೇಕಾಗಿದೆ ಎಂದು ಶಿವಪ್ರಸಾದ್ ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ. ಶಿವಲಿಂಗಪ್ಪ ಜ.ಡಿ.ಸಿ. ಮಾತನಾಡಿ 9.9.1976ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ 47 ವರ್ಷ ತುಂಬಿದೆ. ಹಲವಾರು ಮಹಾನೀಯರು ಈ ಸಂಘದ ಎಳಿಗೆಗಾಗಿ ಶ್ರಮಿಸಿದ್ದಾರೆ. ಗದಗಜಿಲ್ಲಾ ಹಾಗೂ ತಾಲೂಕಿನ ಕಣಗಿನ ಹಾಳು ಗರಾಮದ ಸಿದ್ದನಗೌಡ, ರಾಮನಗೌಡ ಪಾಟೀಲ್ ಇವರು ಸ್ವ ಗ್ರಾಮದಲ್ಲಿ ಕಣಗಿನಾಳ್‍ನಲ್ಲಿ ಸ್ಥಾಪನೆಯಾದ ಸಂಘ ಈಗ ಹೆಮ್ಮರವಾಗಿ ಬೆಳೆದಿರುವುದು ಸಂತಸವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿನ್ನೂರೇಶ್ವರ, ಉಳ್ಳಿ ಸುಬ್ಬಯ್ಯ, ಅರಳಿಕುಮಾರಸ್ವಾಮಿ, ಭುವನೇಶ್ ಮೇಟಿ, ಇಬ್ಬರು ಮಹಿಳೆಯರು ಕೇಳಿದ ಪ್ರಶ್ನೆಗಳಿಗೆ ಕಾರ್ಯಾನಿರ್ವಾಹಕ ಅಧಿಕಾರಿ ಕೆ. ಶಿವಲಿಂಗಪ್ಪನವರು ಉತ್ತರಿಸಿದರು. ಈ. ವೀರೇಶ ಸ್ವಾಗತಿಸಿದರು, ರಮೇಶ್. ಬಿಡಿಸಿಸಿ ಬ್ಯಾಂಕ್ ಅಧಿಕಾರಿ ವಂದಿಸಿದರು. ಈ ಸಂದರ್ಭದಲ್ಲಿ ರಾಮನಯ್ಕ, ಜಿ.ವೀರೇಶ್, ಉಪ್ಪಾರಳ್ಳಿ ಶಿವಮೂರ್ತಿ, ಉಪ್ಪಾರಳ್ಳಿಶೋಭಾ ಉಪಾಧ್ಯಕ್ಷೆ ಜಿ.ರೇಣುಕಾಮಲ್ಲೇಶಪ್ಪ, ಸಣ್ಣ ತಿಮ್ಮಪ್ಪ. ಕೆ.ಶರಣಪ್ಪ ಸಣ್ಣ ಕುಮಾರಸ್ವಾಮಿ, ಇಸ್ಮಾಯಿಲ್, ರೊಡ್ಡಯ್ಯನವರ ತಿಪ್ಪಯ್ಯ ಗಡಂಬ್ಲಿ ಚನ್ನಪ್ಪ ಅಲ್ಲದೆ ಬಿಡಿಸಿಸಿ ಬ್ಯಾಂಕ್‍ನ ಕ್ಷೇತ್ರಾಧಿಕಾರಿ ಗಂಡಿ ಮಲಿಯಪ್ಪ ಮಾಜಿ ಅಧ್ಯಕ್ಷ ಕುರುಬರ ಸತ್ಯಪ್ಪ, ವಸಂತಕುಮಾರ್ ಅಲ್ಲದೆ ಹಲವಾರು ಮಹಾನೀಯರು ಉಪಸ್ಥಿತರಿದ್ದರು. ಕಎ. ಶಿವಪ್ಪ ಪ್ರಾರ್ಥಿಸಿದರು.