ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು: ಶಾಸಕ ಪಾಟೀಲ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಮಾ.16: ತಾಲ್ಲೂಕಿನ ಬೇನಚಿಂಚೋಳಿ ಗ್ರಾಮದಲ್ಲಿ ಕಾಂಗ್ರೇಸ್ ಗ್ಯಾರೆಂಟಿ ಕಾರ್ಡ ವಿತರಣೆ ಕಾರ್ಯಕ್ರಮ ಜರುಗಿತು. ಮಾಜಿ ಸಚಿವರು, ಹಾಲಿ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೇನಚಿಂಚೋಳಿ ಗ್ರಾಮದಲ್ಲಿ 1 ಎಕ್ಕರೆ ಹಾಗು ಜಲಸಂಗಿ ಗ್ರಾಮದ 2 ಎಕ್ಕರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿಸಲಾಗಿದ್ದು, ಆಸ್ಪತ್ರೆ ಕಟ್ಟಡಕ್ಕೆ ನಿರ್ಮಾಣಕ್ಕೆ ತಲಾ 3 ಕೋಟಿ ಯಂತೆ ಸುಮಾರು 6 ವಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರ್‍ಮಿಯ್ಯಾ, ಹಳ್ಳಿಖೇಡ(ಬಿ) ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಬಾಬು ಟೈಗರ್, ವಿಠಲ ಡಾವರಗಾಂವ, ಮಂಜುನಾಥ ಖೇರೋಗಿ, ವಿನೋದ ಖೇರೋಜಿ, ಸಂಗಮನಾಥ ದೇಸಾಯಿ, ವೈಜಿನಾಥ ಡಾಂಗೆ, ಮಲ್ಲಿಕಾರ್ಜುನ. ಆನಂದ ಖಂಡಗೊಡ, ಪಾಂಡುರಗ ಶಿವಪುತ್ರ, ತುಕರಾಮ, ಕೇಶಪ್ಪ ಬಿರಾದಾರ, ರಾಜಶೇಖರ ಪಾಟೀಲ್ ಮದರಗಾಂವ, ಮಲ್ಲಿಕಾರ್ಜುನ ಮಹೇಂದ್ರಕರ್, ಉಪಸ್ಥತರಿದ್ದರು.