ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ sಸ್ತುತ್ಯಾರ್ಹ: ಖೇಣಿ

ಬೀದರ:ಜೂ.10: ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಾದ ಮನ್ನಳಿ, ನಿರ್ಣಾ, ಘೋಡಂಪಳ್ಳಿ, ಬಗದಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೊರೊನ ಹಾಗೂ ಇನ್ನಿತರ ಕಾಯಿಲೆಗಳಿಗೆ ಜನರಿಗೆ ತುಂಬಾ ನೆರವಾಗುತ್ತಿದ್ದು ಈ ಗ್ರಾಮಗಳ ಪಿ.ಹೆಚ್.ಸಿ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಬೀದರ್ ದಕ್ಷಿಣ ಶಾಸಕ ಅಶೋಕ ಖೇಣಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ತಮ್ಮ ಅವಧಿಯಲ್ಲಿ ಈ ಆರೋಗ್ಯ ಕೇಂದ್ರಗಳು ನಿರ್ಮಾಣವಾಗಿದೆ. ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಗಮಗಕ್ಕೆ ತಂದು ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ. ಜನರು ದೂರದ ನಗರ ಪ್ರದೇಶಗಳಿಗೆ ಹೊಗದೆ ಕ್ಷೇತ್ರದಲ್ಲಿ ನಿರ್ಮಾಣವಾದ ಆರೋಗ್ಯ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ತೆಗೆದುಕೊಳುತ್ತಿದ್ದಾರೆ. ಕೊರೊನ ಸೊಂಕು ದೃಡಪಟ್ಟು ಮನೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಸೋಂಕಿತರ ಮನೆ ಬಾಗಿಲಿಗೆ ತಮ್ಮಅಭಿಮಾನಿಗಳ ಸಂಘ ಉಚಿತ ಔಷಧಿ ನೀಡುವ ಕೆಲಸ ಮಾಡುತ್ತಿದೆ. ಕೊರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಬೀದರ ದಕ್ಷಿಣ ಕ್ಷೇತ್ರದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಈ ಸೋಂಕಿನ ಸರಪಳಿ ಕತ್ತರಿಸಿ ಕೊರೋನಾ ಮುಕ್ತವನ್ನಾಗಿಸಲು ಜಿಲ್ಲಾಡಳಿತ ಈಗಾಗಲೇ ಶ್ರಮಿಸುತ್ತಿದೆ. ಕೊರೋನಾ ಬಗ್ಗೆ ಹೆದರದೇ ನಾಗರಿಕರೆಲ್ಲರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ .

ಹಾಗೇ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೊಡಲೇ ಹತ್ತಿರದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಿರಿ ಎಂದು ವಿನಂತಿಸುತ್ತೇನೆ. ಅನಗತ್ಯವಾಗಿ ಯಾರೊಬ್ಬರೂ ಹೊರಗಡೆ ಬರಬೇಡಿ, ನಿಮ್ಮ ಕುಟುಂಬಸ್ಥರ ಆರೋಗ್ಯದ ಜವಾಬ್ದಾರಿ ನಿಮ್ಮ ಮೇಲಿರುವ ಕಾರಣ ಎಚ್ಚೆತ್ತುಕೊಳ್ಳಿರಿ ಎಂದು ಪ್ರಕಟಣೆ ಮೂಲಕ ಅಶೋಕ ಖೇಣಿ ತಿಳಿಸಿದ್ದಾರೆ.