ಪ್ರಾಣ ಬಿಟ್ಟೆವು ವಿದ್ಯುಚ್ಛಕ್ತಿ ಖಾಸಗೀಕರಣ ಆಗಲು ಬಿಡುವುದಿಲ್ಲ: ಬಾಬು ಕೊರೆ

ಅಫಜಲಪುರ:ಎ.17: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುಚ್ಛಕ್ತಿ ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ. ನಾವು ಯಾವುದೇ ಕಾರಣಕ್ಕೂ ಖಾಸಗೀಕಾರಣವಾಗಲು ಬಿಡುವುದಿಲ.್ಲ ಒಂದು ವೇಳೆ ಸರ್ಕಾರಗಳು ಖಾಸಗೀಕರಣ ಮಾಡಲು ಕೈಹಾಕಿದ್ದೆ ಆದರೆ ನಮ್ಮ ಕುಟುಂಬದ ಸಮೇತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರಗಳು ಬಗ್ಗದೆ ಇದ್ದರೆ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ಗುಲ್ಬರ್ಗಾ ಜೆಸ್ಕಾಮ್ ಕಂಪನಿಯ ಉಪಾಧ್ಯಕ್ಷ ಬಾಬು ಕೊರೆ ಎಚ್ಚರಿಕೆ ನೀಡಿದರು ಅವರು ಇಂದು ಪಟ್ಟಣದ ಶಾರದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ(659) ಅಡಿಯಲ್ಲಿ ಅಫಜಲಪುರ ಹಾಗೂ ಚೌಡಾಪೂರ ಉಪ ವಿಭಾಗದ ಜೆಸ್ಕಾಮ್ ವತಿಯಿಂದ ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದವರು ಖಾಸಗೀಕರಣದ ಪೆಡಂಭೂತ ಹೋಗಲಾಡಿಸಲು ನಾವು ಜನಾಂದೋಲನಕ್ಕೆ ಮುಂದಾಗಬೇಕು ಈಗಾಗಲೆ ಹಲವೂ ದೊಡ್ಡ ದೊಡ್ಡ ಕಂಪನಿಗಳು ಖಾಸಗೀಕರಣ ಮಾಡಲು ಹೊರಟಿದೆ ಈ ಸರ್ಕಾರ ಕೇವಲ ಸಾಹುಕಾರರ ಸರ್ಕಾರವಾಗಿದೆ ಅಂಬಾನಿ ಆದಾನಿಯಂತಹ ಉದ್ದಿಮೆದಾರರ ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಸರ್ಕಾರದ ಅಧಿನದಲ್ಲಿರುವ ವಿದ್ಯುತ್ಚಕ್ತಿ ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ ಇದು ನಮ್ಮ ದುರಾದೃಷ್ಟಕರ ಎಂದು ಕಳವಳ ವ್ಯಕ್ತ ಪಡಿಸಿದರು. ಈಗಾಗಲೆ ರಾಜ್ಯ ಸಮೀತಿಯಲ್ಲಿ ವಿದ್ಯುತ್ಚಕ್ತಿ ಖಾಸಗೀಕರಣ ಬಗ್ಗೆ ಹಲವು ಬಾರಿ ಚರ್ಚೆ ಮಾಡಿದ್ದು ಈಗಾಗಲೆ ಕೇಲವೂ ದಿನಗಳ ಹಿಂದೆ ಸಿ.ಐ.ಟಿ.ಯು.ವಿನ ರಾಜ್ಯಾಧ್ಯಾಕ್ಷೆ ಎನ್ ವರಲಕ್ಷ್ಮಿ ಅವರ ಜೊತೆ ಹೊರಾಟದ ರೂಪರೊಷಗಳ ಬಗ್ಗೆ ಮಾತುಕತೆ ನಡೆದಿದೆ ಖಾಸಗೀಕರಣ ಆಗಲು ನಾವೂ ಯಾವುದೇ ಕಾರಣಕ್ಕೂ ಬೀಡುವುದಿಲ್ಲ ಒಂದು ವೇಳೆ ಸರ್ಕಾರ ಬಗ್ಗದಿದ್ದರೆ ನಾವುಗಳು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಪ್ರಸಂಗ ಬಂದರೆ ಪ್ರಾಣ ಕೊಡಲು ಸಿದ್ಧರಾಗಬೇಕೆಂದು ನೌಕರರಿಗೆ ಕರೆನೀಡಿದರು. ಈಗಾಗಲೆ ಸಾರಿಗೆ ನೌಕರರ ಹೋರಾಟಗಳು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ನೋಡುತ್ತಿದ್ದಿರಿ ಖಾಸಗಿ ವಾಹನಗಳ ಓಡಾಟದಿಂದ ದುಪ್ಪಟ್ಟು ಹಣ ಕೊಟ್ಟು ಓಡಾಡುವ ಪರಸ್ಥಿತಿ ಅದೆರೀತಿ ಮುಂದಿನ ದಿನಗಳಲ್ಲಿ ನಮ್ಮ ಪರಸ್ಥಿತಿ ಭಿನ್ನಹವಿಲ್ಲ ನಮ್ಮ ವಿದ್ಯುತ್ಚಕ್ತಿ ಖಾಸಗೀಕರಣವಾದರೆ ನಾವೊಬ್ಬರ ಮಾಲೀಕನ ಕೈ ಕೆಳಗೆ ದುಡಿಯಬೇಕಾಗುತ್ತದೆ ಎಂದು ನೌಕರರಿಗೆ ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಗಣಪತಿ ಮರಪಳ್ಳಿ, ಬಾಬುಗೌಡ ಪಾಟೀಲ್, ಬಿ.ಆರ್.ಬುದ್ದಾ. ನಿಕಟ ಪೂರ್ವ ಉಪಾಧ್ಯಕ್ಷ ನೀಲಪ್ಪ ಧೋತ್ರೆ ,ಡಿಎಲ್ ಜಾಧವ್, ಮಹಾರಾಜ ಜಮಾದಾರ ಮಾತನಾಡಿ ನೀವು ಕೊಟ್ಟ ಮತದಾನ ಅದವೇ ದೊಡ್ಡ ಬಹುಮಾನ ಆ ನಿಮ್ಮ ಋಣವು ಎಂದೆಂದಿಗೂ ಮರೆಯುದಿಲ್ಲ ನೀವು ಮಾಡುವ ಸನ್ಮಾನ ನಮ್ಮನ್ನು ಹೆಚ್ಚಿನ ಜವಾಬ್ದಾರಿವಿತವಾಗಿ ಮಾಡಿದೆ ನೌಕರರ ಎನೇ ಸಮಸ್ಯಗಳಿದ್ದರು ಪರಿಹಾರ ಮಾಡಲು ಸಧಾ ಸಿದ್ಧ 98-99 ಸಾಲಿನಲ್ಲಿ ಕೆಲಸ ಮಾಡಿದಂತಹ ಡಿ & ಆರ್, ಆರ್ & ಆರ್ & ಗ್ಯಾಂಗಮನಗಳಾಗಿ ಹೀಗೆ ಒಟ್ಟು 7528 ನೌಕರರಿಗೆ ಪಿಂಚಣೆಯನ್ನು ಜಾರಿಗೆ ಕಳೆದ ಅವಧಿಯಲ್ಲಿ ಜಾರಿಗೆ ತಂದಿದ್ದೇವೆ, 7 ವರ್ಷವಿದ್ದ ಫೇಸ್ಕೆಲ್‍ನ್ನು 5 ವರ್ಷಕ್ಕೆ ಇಳಿಕೆ ಮಾಡಿದೆ ಅದೇ ರೀತಿ 10 ಹಲವು ಹಿಂದಿನ ಅವಧಿಯಲ್ಲಿ ಕೆಲಸ ಮಾಡಿದ್ದೇವೆ ಅದೇ ರೀತಿ ಮುಂದೆಯು ಕೂಡ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತೇವೆ ನಿಮ್ಮೆಲ್ಲ ನೌಕರರ ಸಹಕಾರ ಅತ್ಯಗತ್ಯವಾಗಿದೆ.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ನಾಗರಾಜ್ ಪ್ರವಾಹದ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗಳು ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡರು ಹಾಗೂ ಸೇವೆಯಲ್ಲಿ ಒಗ್ಗಟ್ಟಿನಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ಪರಿಣಾಮ ಇಂದು ನಿಗಮಕ್ಕೆ 6 ತಿಂಗಳಲ್ಲಿ ಹೆಚ್ಚಿನ ಆದಾಯ ಬಂದಿದೆ ಎಂದ ಅವರು ಖಾಸಗಿ ಸಂಸ್ಥೆಯವರು ಕಂಪನಿಯ ಆದಾಯ ನಿರೀಕ್ಷಿಸುತ್ತಾರೆ ಹೊರತು ಅವರಿಂದ ಉತ್ತಮ ಸೇವೆ ಗ್ರಾಹಕರು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚೌಡಾಪುರ ಉಪ ವಿಭಾಗದ ಎಇಇ ಸಂಜೀವಕುಮಾರ ರಾಠೋಡ ಶಾಕಾಧಿಕಾರಿಗಳಾದ ಸೈಯದ್ ಇಸಾ ,ಮಹಾಂತೇಶ ಪಾಟೀಲ್, ಚಂದ್ರಕಾಂತ ಪೂಜಾರಿ, ಪಾಂಡುರಂಗ ಸುತಾರ, ಶರಣು ಶೇರಿಕರ, ಶ್ರಿಶೈಲ ದೇಸಾಯಿ, ಮಾರುತಿ ಚಿತ್ರಗಾರ, ಭೂತಾಳಿ ಕಂಟೆಕರ, ಯಲ್ಲಪ್ಪ ದೊಡ್ಡಮನಿ, ಮುತ್ತಣ್ಣ ಪೂಜಾರಿ, ಚನ್ನಬಸು ಅರಳುಗುಂಡಗಿ, ಶ್ರಿಶೈಲ ಕೊರಳ್ಳಿ, ಉಮಾಕಾಂತ ಹಡಲಗಿ, ಅಬ್ದುಲ್ ಮಜೀದ, ತೇಜರಾಯ ಪಾಟೀಲ್, ಮುಂತಾದವರು ಇದ್ದರು ಕು.ಶಿವಾನಿ ಅಂಬೂರೆ ನಿರೂಪಿಸಿ ವಂದಿಸಿದರು.