ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ


ನವಲಗುಂದ,ಏ.16: ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮದೇವತೆಯ ದೇವಸ್ಥಾನ ಉದ್ಘಾಟನೆ ಹಾಗೂ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇನಾಂಹೊಂಗಲದ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ. ಹಾಗೂ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದ ಪಲಹಾರೇಶ್ವರ ಶ್ರೀಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಒಂಬತ್ತು ದಿನ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ
ಗ್ರಾಮ ದೇವಿಗೆ ಬೆಳ್ಳಿ ಕಿರೀಟ ಕಾಣಿಕೆ:
ಗ್ರಾಮದ ಬಾಳಿ ಯವರ ಕುಟುಂಬದವರಿಂದ ದೇವಿಗೆ 1ಕೆಜಿ ಬೆಳ್ಳಿ ಕಿರೀಟಕ್ಕೆ ಮನೆಯಲ್ಲಿ ವಿಶೇಷ ಪೂಜೆ ಮಾಡಿ, ಪಾಲುಕೆಯಲ್ಲಿ ಗ್ರಾಮ ದೇವತೆಯ ದೇವಸ್ಥಾನಕ್ಕೆ ವಾಧ್ಯ ಮೇಳದೊಂದಿಗೆ ಮೆರವಣಿಗೆಯೊಂದಿಗೆ ಸಾಗಿ ಕಿರೀಟ ಕಾಣಿಕೆಯಾಗಿ ದೇವಸ್ಥಾನಕ್ಕೆ ಅರ್ಪಿಸಲಾಯಿತು.
ಗ್ರಾಮದಲ್ಲಿ ಜಾತ್ರಾ ಮಹೋತ್ಸವದಲ್ಲಿ ನೂರಾರು ಅಂಗಡಿ, ಮುಂಗಟ್ಟುಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬಳೆ, ಬಟ್ಟೆ, ಬರೆ, ಅಡುಗೆ, ಮಕ್ಕಳ ಆಟಿಕೆ, ಶೃಂಗಾರದ ವಸ್ತುಗಳ ಖರೀದಿಯಲ್ಲಿ ಮಹಿಳೆಯರು. ಮಕ್ಕಳು ತೊಡಗಿದ್ದರು.
ಈ ಜಾತ್ರಾ ಮಹೋತ್ಸವದ ನಿಮಿತ್ಯ ಗ್ರಾಮದ ಪ್ರತಿ ಮನೆಯ ಹಿರಿಯರು-ಯುವಕರು ಸ್ವಯಂ ಸೇವಕರಾಗಿ ಸೇವೆ ಮಾಡುತ್ತಿರುವದು ವಿಶೇಷವಾಗಿತ್ತು.