ಪ್ರಾಣ ಪಣಕ್ಕಿಟ್ಟು ಸೇವಾನಿರತ ಆಶಾ ಕಾರ್ಯಕರ್ತೆಯರು ಶ್ರೇಷ್ಠರು

ಮಂಗಳೂರು, ಜೂ.೭- ಕೊರೋನಾ ಮಹಾಮಾರಿಯ ಈ ಸಂಕಷ್ಟ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮಾಜದ ಜನರ ಪ್ರಾಣ ರಕ್ಷಣೆಗೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ನಿಜವಾಗಿಯೂ ಅಭಿನಂದನಾರ್ಹರು ಎಂದು ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್ ಇದರ ಸಂಚಾಲಕ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.
ಇಂದಿಲ್ಲಿ ಭಾನುವಾರ ಬಂಟ್ವಾಳ ಕಲ್ಲಡ್ಕ ಇಲ್ಲಿನ ಗೋಳ್ತಮಜಲು ಗಣೇಶ ಮಂದಿರದಲ್ಲಿ ನಡೆದ ಗೋಳ್ತಮಜಲು ಅಮ್ಟೂರು ಗ್ರಾಮದ ಆಶಾ
ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮಾಡಿ ಡಾಕ್ಟರ್ ಭಟ್ ಮಾತನಾಡಿದರು.
ಕಾರ್ಕಳ ಭುವನೇಂದ್ರ ಕಾಲೇಜ್‌ನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ಪೂಜಾರಿ ಹೊಸಮನೆ, ಗಿರಿಜಾ ಕೃಷ್ಣಪ್ಪ ಪೂಜಾರಿ ಮತ್ತು ನಿತಿನ್ ಕೆ. ಮತ್ತಿತರರು ಕಾರ್ಯಕರ್ತೆಯರಿಗೆ ಗೌರವಧನ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀ ವಿ.ಪ್ರಭು, ಗಣೇಶ ಮಂದಿರದ ಗೌರವ ಅಧ್ಯಕ್ಷ ಶ್ಯಾಮ್ ಭಟ್ ತೋಟ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಟೈಲರ್ ಹಾಗೂ ಮುರಳೀಕೃಷ್ಣ ಭಟ್, ನಳಿನಿ ಹೊಸೈಮರ್, ಸರೋಜಿನಿ ಸುಂದರ ಶೆಟ್ಟಿ, ಪುರುಷೋತ್ತಮ್ ಡಿ., ಗೋಪಾಲಕೃಷ್ಣ ಪೂವಳ, ದೈಹಿಕ ಶಿಕ್ಷಕ ಕೆ.ಪುರುಷೋತ್ತಮ, ವಿಘ್ನೇಶ್ ಆಚಾರ್ಯ, ಸುಂದರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ನೆಟ್ಲ ಸ್ವಾಗತಿಸಿದರು. ಮಂದಿರದ ಕೋಶಾಧಿಕಾರಿ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.