ಪ್ರಾಣ ತ್ಯಾಗ ಮಾಡಿದ ಪಿಂಚಣಿ ವಂಚಿತ ನೌಕರರಿಗೆ ಶ್ರದ್ಧಾಂಜಲಿ

ಬೀದರ:ಫೆ.26:ಹಗಲು ರಾತ್ರಿ ಎನ್ನದೆ ಪಿಂಚಣಿಗಾಗಿ ಸತತ ಹೋರಾಟ ಮಾಡುತ್ತಿರುವ ಶಿಕ್ಷಕರ ಮೇಲೆ ಕರುಣೆ ತೋರದ ಸರಕಾರದ ಮನಸ್ಥಿತಿಗೆ ಬೇಸತ್ತು ಪ್ರಾಣತ್ಯಾಗ ಮಾಡಿದ ಸಿದ್ದಯ್ಯ ಹಿರೇಮಠ ಹಾಗೂ ಸಿಂಧನೂರಿನ ಶಂಕ್ರಪ್ಪ ಬೋರಡ್ಡಿ ಇವರಿಗೆ ಬೀದರ ಜಿಲ್ಲಾ ಅನುದಾನಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆಯಲ್ಲಿ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಯರನಳ್ಳಿ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಳೆದ 141 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘ ದಿಂದ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಶ್ರೀ ಶಂಕ್ರಪ್ಪ ಬೋರಡಿ ಸಿಂಧನೂರು ರವರು ಪಿಂಚಣಿ ಹೋರಾಟಕ್ಕೆ ಆಗಮಿಸಿ ಮೆಜೆಸ್ಟಿಕ್ ನ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ದಿನಾಂಕ 21/02/2023 ರಂದು ಪ್ರಾಣ ತ್ಯಾಗ ಮಾಡಿರುತ್ತಾರೆ ನಂತರ ಸರ್ಕಾರದ ಮನೋ ಧೋರಣೆಯಿಂದ ಬೇಸತ್ತು ದಿನಾಂಕ22/02/2023 ರಂದು ನಿವೃತ್ತ ಶಿಕ್ಷಕ ಶ್ರೀ ಸಿದ್ದಯ್ಯ ಹಿರೇಮಠ ರವರು ಬಾದಾಮಿ ಜಿಲ್ಲೆಯ ಹಾಗೂ ಇನ್ನೋರ್ವ ಶಿಕ್ಷಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುತ್ತಾರೆ ಅವರನ್ನು ಹತ್ತಿರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕರಿಯಾಗದೆ ದಿನಾಂಕ 24/02/2023 ರಂದು ನಿಧನ ಹೊಂದಿರುತ್ತಾರೆ. ಸರ್ಕಾರ ಈಗಲಾದರೂ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಅನುದಾನಿತ ಪ್ರೌಢ ಶಾಲಾ ಮುಖ್ಯೋಪಾಧ್ಯಯರ ಸಂಘದ ಜಿಲ್ಲಾಧ್ಯಕ್ಷರಾದ ವಿಜಯ ಕುಮಾರ ಪಾಟೀಲ ಯರನಳ್ಳಿ ಸರಕಾರದಲ್ಲಿ ಮನವಿ ಮಾಡಿದ್ದಾರೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದ ಜಿಲ್ಲಾಧ್ಯಕ್ಷರಾದ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಪಾಟೀಲ್ ಯರನಳ್ಳಿ, ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಮ ನಿಜಾಮಪುರೆ ಸಹ ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ಗಣೇಶ್ ಬಿರಾದರ್, ಸಿದ್ದಾರ್ಥ್ ಕಾಲೇಜಿನ ಉಪನ್ಯಾಸಕರಾದ ಕೆ ಕೃಷ್ಣಾರೆಡ್ಡಿ, ಗೋಪಾಲ್ ಬಡಿಗೇರ್, ಗಿರೀಶ್ ಮೀಸೆ, ಮಹೇಶ್ ಸ್ವಾಮಿ, ಶ್ರೀಮತಿ ಅರ್ಷಿಯ ಬೇಗಮ್ ಮನೋಜ್ ಪಾಟೀಲ್, ಶ್ರೀ ಶಂಕರ್, ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ಪಿಂಚಣಿ ವಂಚಿತ ಶಿಕ್ಷಕರು ಉಪಸ್ಥಿತರಿದ್ದರು