ಪ್ರಾಣಿ-ಪಕ್ಷಿಗಳಿಗೆ ನಿರುಣಿಸಿದ ರೈಜಿಂಗ್ ಹ್ಯಾಂಡ್ಸ್ ಯುವ ಸಂಸ್ಥೆ

ಬೀದರ್: ಮೇ.12:ಬೆಸಿಗೆ ಬಂತೆಂದರೆ ಮಾನವನಾದಿಯಾಗಿ ಎಲ್ಲ ಪ್ರಾಣಿ, ಪಕ್ಷಿಗಳಿಗೆ ನೀರೇ ಆಸರೆ. ಊಟಕ್ಕಿಂತ ನೀರೆ ಬಲು ಇಷ್ಟ. ಬದುಕಲು ನೀರೆ ಮೊದಲು ಅಮೃತ. ಈ ವರ್ಷವಂತೂ ಬೇಸಿಗೆ ಬಿಸಿಲು ವಿಪರಿತವಾದ್ದರಿಂದ ನೀರೇ ಎಲ್ಲ ಪ್ರಾಣಿಗಳಿಗೆ ಬೇಕಾದ ವಸ್ತು.
ಬೀದರ್ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಸತೀಶ ಬೆಳಕೋಟೆ ನೇತೃತ್ವದ ರೈಜಿಂಗ್ ಹ್ಯಾಂಡ್ಸ್ ಯುತ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರತಿ ವóರ್ಷ ಒಂದಲ್ಲೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಲಿದ್ದು, ಈ ವರ್ಷ ನಗರದ ದೇವಿ ಕಾಲೇನಿ, ಅಕ್ಕ ಮಹಾದೇವಿ ಬಡಾವಣೆ, ಕರ್ನಾಟಕ ಐಟಿಐ ಕಾಲೇಜು ಅವರಣ ಹೀಗೆ ಅನೇಕ ಕಡೆ ಸ್ವಂತ ಖರ್ಚಿನಲ್ಲಿ ನೀರಿನ ಟಬ್‍ಗಳನ್ನು ಖರಿದಿಸಿ ಇಲ್ಲಿಯ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಕೈಗೊಂಡಿರುವರು.
ಹಿಂದೆ ಕೋವಿಡ್ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಹಾಗೂ ದುರ್ಬಲ ವರ್ಗದವರಿಗೆ ಆಹಾರದ ಕಿಟ್ ಹಂಚಿ ಮಾನವಿಯತೆ ಮೆರೆದಿದ್ದರು. ಈಗ ಬಿಸಿಲಿನ ತಾಪಕ್ಕೆ ಬಳಲಿದ ಪ್ರಾಣಿ-ಪಕ್ಷಿಗಳಿಗೆ ನೀರನಿತ್ತು ಅವುಗಳ ಪ್ರಾಣಕ್ಕೆ ಅಮೃತ ಧಾರೆ ಎರೆದಿರುವರು.
ಕಳೆದ ಎಳೆಂಟು ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್ ಮತ್ತು ರೈಜಿಂಗ್ ಹ್ಯಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಮೂಲಕ ಉಪಕಾರಿ ಕಾರ್ಯಗಳು ಮಾಡಿ ಭೇಷ್ ಎನಿಸಿಕೊಂಡಿದ್ದರಲ್ಲದೇ ನೆಹರು ಯುವ ಕೇಂದ್ರ ಸಂಘಟನೆಯು ಉಭಯ ಸಂಸ್ಥೆಗಳ ಮುಖ್ಯಸ್ಥರಾದ ಸತೀಶ ಬೆಳಕೋಟೆ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಅನೇಕ ಜನೌಪಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೋತ್ಸಾಹಿಸುತ್ತಿದೆ.
ಒಟ್ಟಾರೆ ಇಂಥ ಅಪರೂಪದ ಹಾಗೂ ಅವಿಸ್ಮರಣಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇತರೆ ಸಂಘ, ಸಂಸ್ಥೆಗಳಿಗೆ ಮಾದರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಬಹುದು.