ಪ್ರಾಣಾಯಾಮ ತರಬೇತಿ ಕಾರ್ಯಾಗಾರ

ಚಿತ್ರದುರ್ಗ. ಏ.೧೮; ದೇಶಾದ್ಯಂತ ಕೋವಿಡ್ 19 ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಮಹರ್ಷಿ ಯೋಗ ಶಿಕ್ಷಣ ಸಮಿತಿ, ಚಿತ್ರದುರ್ಗ ಇವರ ವತಿಯಿಂದ ಸಾರ್ವಜನಿಕರಿಗಾಗಿ  ನಗರದ ಮಹಾರಾಣಿ ಕಾಲೇಜು ಆವರಣದಲ್ಲಿ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಯೋಗ ತರಬೇತಿ ನೀಡಿ ಮಾತನಾಡಿದ ಯೋಗ ಗುರು ಕೆ.ರವಿ ಅಂಬೇಕರ್ ” ಹೆಚ್ಚುತ್ತಿರುವ ಕೊರೊನ ಸೋಂಕು ತಡೆಗಟ್ಟಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಪ್ರತಿಯೊಬ್ಬರೂ ಯೋಗ ತರಬೇತಿ ಹೊಂದುವುದು ಅನಿವಾರ್ಯ  ಪ್ರತಿದಿನ ಯೋಗ ಅಭ್ಯಾಸ ಮಾಡುವವರಿಗೆ ಕೊರೊನ ಮಾತ್ರವಲ್ಲ ಯಾವುದೇ ವೈರಾಣು ಸೋಂಕು ತಗಲುವುದು ತುಂಬಾ ಕಡಿಮೆ, ಸಾರ್ವಜನಿಕರು ಎಲ್ಲರೂ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಯೋಗ ಕಲಿಯುವುದು ಕಷ್ಟ ಅದಕ್ಕಾಗಿ ಮಹರ್ಷಿ ಯೋಗ ಶಿಕ್ಷಣ ಸಮಿತಿಯು ಹಳ್ಳಿ ಹಳ್ಳಿಗಳಲ್ಲಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ಧು ಸಾರ್ವಜನಿಕರು ಹಚ್ಚಿನದಾಗಿ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ” ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಹರ್ಷಿ ಯೋಗ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಕಾರ್ಯದರ್ಶಿ ವಸಂತಲಕ್ಷ್ಮಿ, ಸದಸ್ಯರಾದ ಮಂಗಳ ರಮೇಶಚಾರ್, ವಿಂಡ್ಮಿಲ್ ಶರಣಪ್ಪ, ರಮೇಶ್‌ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.