ಪ್ರಾಜೆಕ್ಟ್ ತಯಾರಿಯಲ್ಲಿ ಸ್ಥಳೀಯ ಸಮಸ್ಯೆಗಳ ಆಯ್ಕೆ ಇರಲಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೪.  ಸ್ನಾತಕೋತ್ತರ ಎಂಕಾಂ  ವಿದ್ಯಾರ್ಥಿಗಳು   ತಮ್ಮ ಪ್ರಾಜೆಕ್ಟ್    ವರದಿ ತಯಾರಿಸುವಾಗ ಸ್ಥಳೀಯ ವಿಷಯಗಳ ಹಾಗೂ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸಿದಾಗ ಆ ಸಮಸ್ಯೆ ಒಂದು ಪರಿಹಾರ ಸಿಕ್ಕಿ ಗುಣಾತ್ಮಕತೆ ಬರುತ್ತದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ  ಅಮೂಲ್ಯ ಆರ್ ಹೆಚ್  ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ    ಪ್ಲೇಸ್ಮೆಂಟ್ ಸೆಲ್ ವತಿಯಿಂದ   ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ತಯಾರಿ ಕುರಿತು ಉಪನ್ಯಾಸ ನೀಡಿದರು.ಪ್ರಾಜೆಕ್ಟ್ ವರದಿ ತಯಾರಿಗಾಗಿ ವಿದ್ಯಾರ್ಥಿಗಳು ಬೆಂಗಳೂರು ಹಾಗೂ ಇತರೆ ಮಹಾನಗರಗಳಿಗೆ ಹೋಗಿ ಅಲ್ಲಿಯ ಕಂಪನಿಗಳ ಕುರಿತು ಅಧ್ಯಯನ ಮಾಡುವುದಕ್ಕಿಂತ ದಾವಣಗೆರೆ ನಗರದ ವ್ಯಾಪಾರ ವಹಿವಾಟು ನಡೆಸುವ ಅಥವಾ ಕಂಪನಿಗಳಲ್ಲಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಅದಕ್ಕೊಂದು ಪರಿಹಾರ ಒದಗಿಸಿದರೆ ಅವರಿಗೂ ಅನುಕೂಲವಾಗುತ್ತದೆ ಹಾಗೂ ತಾವು ಮಂಡಿಸುವ ಪ್ರಾಜೆಕ್ಟ್ ವರದಿಗೆ  ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪ್ರಾಸ್ತವಿಕವಾಗಿ ಮಾತನಾಡಿದ ಪ್ಲೇಸ್ಮೆಂಟ್ ಅಧಿಕಾರಿಯದ ವೆಂಕಟೇಶ್ ಬಾಬು  ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳವಣಿಗೆಯನ್ನು ಹೊಂದಿರುತ್ತೀರಿ ಬೌಧಿಕ ಗುಣಮಟ್ಟ ಹೆಚ್ಚಿಸಲು ಸಾಮಾಜಿಕ ವಿಷಯಗಳನ್ನು ವಿವರವಾಗಿ ಅಧ್ಯಯನ ನಡೆಸಿ ಅದಕ್ಕೆ ಒಂದಿಷ್ಟು ಪರಿಹಾರಗಳನ್ನು ಒದಗಿಸುವ ಪ್ರಯತ್ನ ಪ್ರಾಜೆಕ್ಟ್ ವರದಿ ತಯಾರಿಕೆಯಿಂದ ಆಗುತ್ತದೆ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಬೇರೆ ಬೇರೆ ವಿಷಯಗಳ ಕುರಿತು ಅಧ್ಯಯನ ನಡೆಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಬಿ   ಸಿ ತಹಸೀಲ್ದಾರ  ವಿಭಾಗದ ಸಂಯೋಜಕರಾದ ದಾ ಮಂಜುನಾಥ್ ಜೆಎಂ ಪ್ಲೇಸ್ಮೆಂಟ್ ಅಧಿಕಾರಿ ರಾಜ ಮೋಹನ್ ಎನ್ ಆರ್ ಹಾಗೂ ಇತರ  ಉಪನ್ಯಾಸಕರು ಭಾಗವಹಿಸಿದ್ದರು