ಪ್ರಾಚೀನ ಕುರುಹುಗಳ ಸಂರಕ್ಷಣೆ ನಡೆಯಲಿ


ಗುಳೇದಗುಡ್ಡ.ಮಾ.23:ತಾಲ್ಲೂಕಿನ ಕೆಲವಡಿ ಗ್ರಾಮವು ಐತಿಹಾಸಿಕ ಗ್ರಾಮವಾಗಿದೆ. ಸಾಹಿತ್ಯ ಸಮ್ಮೇಳನ ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ. ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನ ಪ್ರಾಚೀನ ಇತಿಹಾಸ ಹೊಂದಿದ್ದು. ಕನಕಗಿರಿಯ ರಾಜನಿಗೂ ಈ ಕೆಲವಡಿ ರಂಗನಾಥನಿಗೂ ಸಂಬಂಧವಿರುವ ಬಗ್ಗೆ ಕೆಲವು ಉಲ್ಲೇಖಗಳಿವೆ. ಅದರ ಬಗ್ಗೆ ಮೋಡಿ ಲಿಪಿ ತಜ್ಞನಾಗಿ ಅಧ್ಯಯನ ಮಾಡಿದ್ದು. ಇನ್ನಷ್ಟು ಅಧ್ಯಯನ ಮಾಡಿ ಬೆಳಕು ಚೆಲ್ಲುವ ಕೆಲಸ ಈ ಸಾಹಿತ್ಯ ಸಮ್ಮೇಳನ ಮಾಡಲಿದೆ ಎಂದು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಸಂಗಮೇಶ ಕಲ್ಯಾಣ ಹೇಳಿದರು.
ತಾಲ್ಲೂಕಿನ ಕೆಲವಡಿ ಗ್ರಾಮದಲ್ಲಿ ಗುಳೇದಗುಡ್ಡ ತಾಲ್ಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಗುಳೇದಗುಡ್ಡಕ್ಕೆ ಪ್ರಾಚೀನ ಇತಿಹಾಸವಿದೆ. ಸುತ್ತಲು ಪ್ರಾಚೀನ ಕುರುಹುಗಳು ಸಿಗುತ್ತಿವೆ. ಅವುಗಳನ್ನು ಸಂರಕ್ಷಿಸುವ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ. ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವ ಅಸ್ತ್ರ ಸಾಹಿತ್ಯ ಮಾಡುತ್ತಿದೆ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಎದ್ದು ನಿಲ್ಲಿಸುವ ಮತ್ತು ಸಮಾಜಮುಖಿಯಾಗಿ ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ. ಗ್ರಾಮೀಣ ಭಾಗದಲ್ಲಿ ಅಕ್ಷರ ಜಾತ್ರೆ ನಡೆಸುತ್ತಿ ರುವುದು ಬಹಳಷ್ಟು ಮೆಚ್ಚುವ ಕಾರ್ಯ ಎಂದು ಹೇಳಿದರು.
ಜೆಡಿಎಸ್ ಘಟಕದ ಜಿಲ್ಲಾ ಅಧ್ಯಕ್ಷ ಹನಮಂತ ಮಾವಿನಮರದ, ಮಾಜಿ ಶಾಸಕ ರಾಜಶೇಖರ ಶೀಲವಂತ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಡೈಯಿಟ್ ಪ್ರಾಚಾರ್ಯ ಬಿ.ಕೆ. ನಂದನೂರ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡರ, ತಾ.ಪಂ. ಅಧ್ಯಕ್ಷೆ ರೇಣುಕಾ ಗಾಜಿ, ಖುತುಬುದ್ದೀನ ಖಾಜಿ, ಪ್ರಮೋದ ಕವಡಿಮಟ್ಟಿ, ಡಾ. ಭೀಮನಗೌಡ ಪಾಟೀಲ, ವೈ.ಎಸ್. ಮಜ್ಜಗಿ, ಎಸ್.ಬಿ. ಮಾಚಾ, ಪ್ರಕಾಶ ಮೇಟಿ, ಕೋನಪ್ಪ ಹಲಕುರ್ಕಿ, ಕಸಾಪ ಅಧ್ಯಕ್ಷ ಸಿ.ಎಂ. ಜೋಶಿ, ಮಲ್ಲಿಕಾರ್ಜುನ ರಾಜನಾಳ, ಹೊನ್ನಪ್ಪಗೌಡ ಗೌಡರ, ಬಸವರಾಜ ಯಂಡಿಗೇರಿ, ಚಂದ್ರಶೇಖರ ಕಾಳನ್ನವರ, ಸಂತೋಷ ಕಾಳನ್ನವರ, ಸುರೇಶ ಸಾರಂಗಿ ಇತತರರು ಪಾಲ್ಗೊಂಡಿದ್ದರು.
ಗಮನ ಸೆಳೆದ 100 ಮೀಟರ ಕನ್ನಡ ಧ್ವಜ: ಗುಳೇದಗುಡ್ಡ ತಾಲ್ಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ ಅವರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ 100 ಮೀಟರ್ ಉದ್ದದ ಕನ್ನಡ ಧ್ವಜ ಗಮನ ಸೆಳೆಯಿತು.