ಪ್ರಾಚೀನ ಕಾಲದಲ್ಲಿರುವಂತೆ ಸ್ಮಾರಕಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ:ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್

ಕಲಬುರಗಿ: ಸೆ. 27: ಪ್ರಾಚೀನ ಕಾಲದಲ್ಲಿ ಇರುವಂತೆ ಸ್ಮಾರಕಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರು ಇದರ ಸ್ವಚ್ಫತೆ ಕಾಪಡಿಕೊಂಡು ಹೋಗಬೇಕು ಪ್ರವಾಸೋದ್ಯಮದ ಕುರಿತು ಅರಿವು ಮೂಡಿಸುವಂತೆ ಹಾಗೂ ವ್ಯಾಪಕವಾಗಿ ಪ್ರಚಾರ ಮೂಡಿಸಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ತಿಳಿಸಿದರು.
ಗುರುವಾರದಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಚಿತ್ತಾಪುರ ತಾಲ್ಲೂಕಿನ ನಾಗಾವಿಯಲ್ಲಿನ ಪ್ರಾಚೀನ ಸ್ಮಾರಕಗಳ ಬಳಿ ಸಸಿಗೆ ನೀರೆರೆಯುವ ಮೂಲಕ ಉದ್ಫಾಟಿಸಿ ಮಾತನಾಡಿ, ಪ್ರತಿ ಶಾಲೆಯ ಸ್ಕೂಲ್‍ಗಳು ಮಕ್ಕಳಿಗೆ ಕರೆದುಕೊಂಡು ಬಂದು ಪ್ರಾಚೀನ ಸ್ಮಾರಕಗಳÀ ಬಗ್ಗೆ ಅದರ ಇತಿಹಾಸ ತಿಳುವಳಿಕೆ ಮಕ್ಕಳಿಗೆ ನೀಡಬೇಕೆಂದರು.
ಶಿಕ್ಷಣ ಇಲಾಖೆ ಆಯುಕ್ತರಾದ ಆಕಾಶ್ ರವರು ಮಾತನಾಡಿ ಶಾಲಾ ಮಕ್ಕಳಿಗೆ ಸ್ವಚ್ಫತೆ ಹಾಗೂ ತಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಕಿವಿ ಮಾತು ಹೇಳಿದರು.
ಪ್ರವಾಸಿ ಅಧಿಕಾರಿಗಳಾದ ಶ್ರೀ ಸಂಜೀವ್ ಕುಮಾರ್ ಸ್ವಾಗತಿಸಿದರು.
ಶ್ರೀ ಶಂಭುಲಿಂಗ ವಾಣಿ ಇತಿಹಾಸ ಪ್ರಾಧ್ಯಾಪಕರು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಮಹತ್ವ ಮತ್ತು ಪ್ರಾಚೀನ ನಾಗಾವಿ ಸ್ಮಾರಕಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಬಂಧ ಸ್ಪರ್ಧೆ ಚರ್ಚಾ ಸ್ಪರ್ಧೆ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಮತ್ತು ಇಲಾಖೆ ವತಿಯಿಂದ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ siಟಿez ಮಾಡೆಲ್ ಗಳನ್ನು ಬಿಡುಗಡೆಗೋಳಿಸಲಾಯಿತು
ಈ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ಶಾಲೆಯ ಮಕ್ಕಳು ಹಾಗೂ ಪದವಿಪೂರ್ವ ಕಾಲೇಜಿನ ಮಕ್ಕಳು ಬೋಧಕ ಬೋಧಕ್ಕೆತರ ಸಿಬ್ಬಂದಿ ತಾಲೂಕ ಆಡಳಿತದ ಹಲವಾರು ಅಧಿಕಾರಿಗಳು ಪೆÇಲೀಸ್ ಇಲಾಖೆ ಹಾಗೂ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಶ್ರೀ ರಾಜು ರವರು ಬಂದಂತಹ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರದ ಶ್ರೀ ರಾಜು, ಬಿ ರಾಜಾರಾಮ್ ಉಪ ನಿರ್ದೇಶಕರು ಪ್ರಾಚ್ಯವಸ್ತು ಇಲಾಖೆ ತಹಸಿಲ್ದಾರರು ಚಿತ್ತಾಪುರ ಚಿತ್ತಾಪುರ ತಾಲೂಕು ಆಡಳಿತ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಶಾಲಾ ಮಕ್ಕಳು ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ