ಪ್ರಾಕಾರೋತ್ಸವ-ಲೋಕಕಲ್ಯಾಣಕ್ಕೆ ಪೂಜೆ

ಕೋಲಾರ,ಮೇ.೨೨: ನಗರದ ಕೋಟೆಯ ಶೃಂಗೇರಿ ಶ್ರೀಶಂಕರ ಮಠದಲ್ಲ ಭಕ್ತಿಪೂರ್ವಕವಾಗಿ, ಅತ್ಯಂತ ಶ್ರದ್ಧೆಯಿಂದ ಕಳೆದ ೫ ದಿನಗಳಿಂದ ನಡೆದುಬಂದ ಶ್ರೀ ಶಂಕರ ಜಯಂತಿ ಮಹೋತ್ಸವದ ಕೊನೆ ದಿನ ಪ್ರಾಕಾರೋತ್ಸವ ನಡೆದಿದ್ದು, ಲೋಕಕಲ್ಯಾಣ ಹಾಗೂ ದೇಶವನ್ನು ಕೊರೋನಾ ಮುಕ್ತಗೊಳಿಸಲು ಪ್ರಾರ್ಥನೆ ಸಲ್ಲಿಸಲಾಯಿತು.
ಐದು ದಿನಗಳ ಶಂಕರ ಜಯಂತಿ ಕಾರ್ಯಕ್ರಮದ ಭಾಗವಾಗಿ ಇಂದು ಪ್ರಾಕಾರೋತ್ಸವದೊಂದಿಗೆ ಜಯಂತಿ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಇಂದು ಗುರುಗಳ ಪ್ರಾಕಾರೋತ್ಸವ ನಡೆಸಿ ಭಕ್ತಾದಿಗಳು ಕಳಿಸಿದ ಗೋತ್ರ ನಕ್ಷತ್ರ ಹೆಸರುಗಳ ಬಳಸಿ ಕುಟುಂಬ ಸದಸ್ಯರ ಹೆಸರಿನಲ್ಲಿ ಸಂಕಲ್ಪ ಮಾಡಿ ದೇಶ,ಸಮಾಜದ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು.
ಪ್ರಪಂಚವನ್ನು ಕಾಡುತ್ತಿರುವ ಕೊರೋನಾ ರೋಗ ನಿವಾರಣೆಯಾಗಲಿ, ಸನಾತನ ಧರ್ಮಕ್ಕೆ ಜಯವಾಗಲಿ, ಎಲ್ಲರಿಗೂ ಒಳಿತಾಗಲಿ ಎಂದು ಗುರುಗಳ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ಶಂಕರ ಜಯಂತಿ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡಿದ ಎಲ್ಲರಿಗೂ ಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ ಧನ್ಯವಾದಗಳನ್ನು ಅರ್ಪಿಸಿದರು.
ಇಂದಿನ ಪ್ರಾಕಾರೋತ್ಸವದಲ್ಲಿ ಶಂಕರ ಸೇವಾ ಟ್ರಸ್ಟ್ ಅಧ್ಯಕ್ಷರು,ಪದಾಧಿಕಾರಿಗಾಳು ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಜೆ ಎನ್ ರಾಮಕೃಷ್ಣ, ಶ್ರೀ ಶಂಕರ ಸೇವಾ ಟ್ರಸ್ಟ್ ನ ಹಾಬಿ ರಮೇಶ್, ಹೆಚ್. ಉದಯ್ ಕುಮಾರ್, ಅಪ್ಪಣ್ಣ ಶಾಸ್ತ್ರಿ, ಎಸ್. ಕೆ. ಉಮೇಶ್ ಹಾಜರಿದ್ದರು. ಶ್ರೀನಿವಾಸ ಶಾಸ್ತ್ರಿ, ಸುರೇಶ್ ಶರ್ಮಾ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು.