ಪ್ರಾಂಶುಪಾಲರಿಗೆ ಸನ್ಮಾನ

ಕೋಲಾರ,ಜೂ.೨೪:ಸರ್ಕಾರಿ ಬಾಲಕರ ಪಿಯು ಕಾಲೇಜಿಗೆ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಆತ್ಮೀಯವಾಗಿ ಸನ್ಮಾನಿಸಿದರು.
ಕಾಲೇಜಿನ ಅವರಣದಲ್ಲಿನ ರಂಗಮಂದಿರದ ಮುಂಭಾಗದ ಆವರಣದಲ್ಲಿನ ತಗಡಿನ ಶೀಟ್ ಮೇಲ್ಚಾವಣೆ ನಿರ್ಮಾಣಕ್ಕೆ ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿದ ವೈಎಎನ್, ತಗಡಿನಶೀಟು ಹೊದಿಕೆ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪರುಶುರಾಮ್ ಎನ್.ಉನ್ಕಿ, ಉಪನ್ಯಾಸಕರಾದ ನರಸಾಪುರ ಮಂಜುನಾಥ್, ರತ್ನಪ್ಪ, ಸುಂದರ್ ಮತ್ತಿತರರಿದ್ದರು.