ಪ್ರಾಂತ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ

ರಾಯಚೂರು.ನ.೧೬-ಭಾರತ ವಿಕಾಸ ಪರಿಷತ್ ರಾಯಚೂರು ವತಿಯಿಂದ ಪ್ರಾಂತ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಸಂಪನ್ನಗೊಂಡಿತು. ಶಾಖಾ ಮಟ್ಟದಲ್ಲಿ ನಡೆಸಿ ಪ್ರಾಂತ ಮಟ್ಟದ ಸ್ಪರ್ಧೆಯನ್ನು ರಾಯಚೂರು ನಗರದ ಸಂತೋಷಿ ಹೋಂ ಟೇಲ್ ನಲ್ಲಿ ಆಯೋಜನೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ. ಮಾತನಾಡಿದ ಭಾರತ ವಿಕಾಸ ಪರಿಷತ್‌ನ ದಕ್ಷಿಣ ವಿಭಾಗದ ಅಧ್ಯಕ್ಷರಾದ ಶ್ರೀಯುತ ಕೆ.ವಿ.ಆರ್.ಪ್ರಸಾದ್ ಅವರು ಉಪಸ್ಥಿತರಿದ್ದರು. ಹಾಗೂ ಪರಿಷತ್ ಶಾಲಾ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಕಾರ್ಯಕ್ರಮ ಗಳನ್ನು ಮಾಡುತ್ತಾ ಬರ್ತಾ ಇದೆ ಹಾಗೂ ಆರೋಗ್ಯ ಕಾರ್ಯಕ್ರಮ ಗಳನ್ನು ಆಯೋಜಿಸುತ್ತದೆ ಎಂದರು. ಪ್ರಾಂತ ಅಧ್ಯಕ್ಷ ರಾದ ಶ್ರೀ ಯುತ ಪುರುಷೋತ್ತಮ ಇನ್ನಾಣಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಸ್ವಾಮಿರಾವ ದೇಶಪಾಂಡೆ ಅವರು ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ನಾಡಿನ ಖ್ಯಾತ ಸಂಗೀತ ಗಾರರಾದ ಶ್ರೀ ಮತಿ ಧರೀತ್ರೀ ಮೈಸೂರು ಅವರು ಹಾಗೂ ಶ್ರೀ ಎಸ್ ಮೋಹನ್ ಬೆಂಗಳೂರು ಅವರು ಸ್ಪರ್ಧೆಗೆ ವೀಕ್ಷಕರಾಗಿ ಆಗಮಿಸಿದರೆ ಶ್ರೀ ವೆಂಕಟೇಶ ದಾಸನಾಳ ಗಂಗಾವತಿ, ಹಾಗೂ ಶ್ರೀಮತಿ ದೇವರು ಅವರು ನಿರ್ಣಾಯಕ ರಾಗಿ ಆಗಮಿಸಿದ್ದರು. ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯಲ್ಲಿ ಬೆಳಗಾವಿ, ಗಂಗಾವತಿ, ಸಿಂಧನೂರು ಹಾಗೂ ರಾಯಚೂರು ಶಾಖೆಗಳ ತಂಡಗಳು ಭಾಗವಹಿಸಿದ್ದವು ಸ್ಪರ್ಧೆ ಯಲ್ಲಿ ರಾಷ್ಟ್ರ ಭಕ್ತಿ ಗೀತೆಗಳನ್ನು ಹಿಂದಿಯಲ್ಲಿ ಮತ್ತು ಸಂಸ್ಕೃತದಲ್ಲಿ ಅಲ್ಲದೆ ಕನ್ನಡ ದೇಶ ಭಕ್ತಿ ಗೀತೆ ಹಾಗೂ ಜಾನಪದ ವಿಭಾಗಗಳಲ್ಲಿ ನಡೆಸಲಾಯಿತು.
ಹಿಂದಿ ಮತ್ತು ಸಂಸ್ಕೃತ ವಿಭಾಗದಲ್ಲಿ ರಾಯಚೂರಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲೆ ವಿದ್ಯಾರ್ಥಿ ಗಳು ಪ್ರಥಮಸ್ಥಾನ ಗಳಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆ ಆದರು. ಕ್ರಮವಾಗಿ ಬೆಳಗಾವಿ, ಸಿಂಧನೂರು ತಂಡಗಳು ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು, ಕನ್ನಡ ವಿಭಾಗದಲ್ಲಿ ಬೆಳಗಾವಿ ತಂಡಕ್ಕೆ ಪ್ರಥಮ ಸ್ಥಾನ ಹಾಗೂ ಸಿಂಧನೂರು ತಂಡಕ್ಕೆ ದ್ವಿತೀಯ ಸ್ಥಾನ ಗಳಿಸಿದರು ಉಳಿದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಪ್ರಾಂತ ಮಟ್ಟದ ಪದಾಧಿಕಾರಿಗಳಾ ಶ್ರೀಮತಿ ಸ್ವಾತಿ ಗೋಡೆ ಕರ್, ಶ್ರೀಮತಿ ಜಾನಕಿ ಪುರೋಹಿತ, ಶ್ರೀಮತಿ ದಾನಮ್ಮ ಸುಭಾಷ್ ಚಂದ್ರ, ಶ್ರೀ ಯುತ ರಾದ ವಿನಾಯಕ ಮೋರೆ, ಇವರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಿಂಧನೂರು, ಬೆಳಗಾವಿ, ಗಂಗಾವತಿ ಶಾಖೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ರಾಯಚೂರು ಶಾಖೆಯ ಹಿರಿಯರಾದ ಹನುಮಂತರಾವ್ ದಂಪತಿಗಳು, ಪಿ ಟಿ ಆನಂದ ರಾವ್ , ಡಾಕ್ಟರ್ ಆನಂದ ಫಡ್ನೀಸ್, ಶಿವಶಂಕರ್ ಅಡ್ವೊಕೇಟ್ ಬಾದರ್ಲಿ ರಮೇಶಾಚಾರ, ಸೇತುಮಾಧವ ಕೇರೂರ್ ಸದಾನಂದ ಪ್ರಭು, ಅನ್ವರ್ ಪಾಷಾ ಯಶೋದಾ ವೈ,. ಪಂಕಜ ಮುಧೋಳ, ಶ್ರೀಪಾದ, ನರಹರಿ ದೇವರು, ನಂದಾದೇಶಪಾಂಡೆ ವಿಜಯಲಕ್ಷ್ಮಿ ಪಾಸೋಡಿ, ಸುಮತಿ ಶಾಸ್ತ್ರಿ, ಭಾರತಿ ಗೋರಕಲ ಹಾಗೂ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು. ಅರುಣಾ ಹಿರೇಮಠ ಅವರು ನೀರೂಪಿಸಿದರು. ಕಾರ್ಯಕ್ರಮಕ್ಕೆ ತಿರುಪತಿ ಜೋಷಿ ವಂದಿಸಿದರು.