ಪ್ರಸಿದ್ಧ ಸಾಲೋಟಗಿಯ ನೀರಾಟ

ಇಂಡಿ:ಎ.12:ಸಾಲೋಟಗಿಯ ಶ್ರೀ ಶಿವಯೋಗೀಶ್ವರರ ಜಾತ್ರೆ ಕುರಿತು ಮಂಗಳವಾರ ರಾತ್ರಿ ನೀರಾಟ ನಡೆಯಿತು.

ಹಿನ್ನೆಲೆ – ಶ್ರೀ ಶಿವಯೋಗೀಶ್ವರರ ಮಾತಾ ಪಿತ್ರಗಳ ಅಭಿಪ್ಸೆಯ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆನಡೆಯುವ ಸಂದರ್ಭದಲ್ಲಿ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ಮಧು ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಅಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ.ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಿಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗಿಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರುಗೆ ನೀರು ಗಂಗಾಂಬಿಕೆಯ ಮೇಲೆಮಾತ್ರ ಬಿಳುತ್ತದೆ.ಈ ಸನ್ನಿವೇಶವೇನೀರಾಟದ ರೂಪದಲ್ಲಿಧಾರ್ಮಿಕ ಆಧ್ಯಾತ್ಮಿಕಮತ್ತು ಸಾಂಸ್ಕøತಿಕ ಸಂಕೇತವಾಗಿದೆ.

ಮಂಗಳವಾರ ಒಳಗಿನ ಗುಡಿಯಿಂದಶಿವಯೋಗೀಶ್ವರರ ಉತ್ಸವಮೂರ್ತಿಯನ್ನುಭವ್ಯ ಮೆರವಣೆಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿಕೂಡಿಸಿದ ನಂತರ ಸರಿಯಾಗಿ ರಾತ್ರಿ ಒಂದು ಗಂಟೆಗೆನೀರಾಟ ಪ್ರಾರಂಭವಾಯಿತು. .ಗಂಗಾಂಬಿಕೆಯನ್ನುಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಒಳಿಳಿಯದಂತೆ ಭದ್ರ ಪಡಿಸುತ್ತಾರೆ. ಹೊರಗಿನ ಗುಡಿಯ ಮುಂದೆಮತ್ತು ಹಿಂದೆಇರುವ ಎರಡು ಬಾವಿಗಳಿಂದಭಕ್ತರು ಬಿಂದಿಗೆಗಳಲ್ಲಿ ನೀರು ಹೊತ್ತುಓಡುತ್ತ ಶಿವಯೋಗೀಶ್ವರ ಎಂದು ಕೂಗುತ್ತ ಬಿಂದಿಗೆಯ ಮೇಲೆ ನೀರು ಸುರಿಸುತ್ತಾರೆ.ನಸುಕಿನ ಐದು ಗಂಟೆಗೆನೀರಾಟ ಮುಕ್ತಾಯವಾಯಿತು. ಗಂಗಮ್ಮನ ಬಿಂದಿಗೆಯನ್ನು ಶಿವಯೋಗೀಶ್ವರರೆಡಕ್ಕೆ ತಂದು ಇಟ್ಟರು. .ಶ್ರೀಗಂಧದಚಟುಕಗಳ ಮೂಲಕ ಬಿಂದಿಗೆಯಲ್ಲಿ ಸಂಗ್ರಹವಾದ ನೀರಿವ ಪ್ರಮಾಣದಷ್ಟು ಆ ವರ್ಷದಮಳೆಯಾಗುತ್ತದೆ ಮತ್ತು ಊರಲ್ಲಿ ಸಮೃದ್ಧಿ ತುಂಬುತ್ತದೆಎಂಬ ಘನವಾದನಂಬಿಕೆ.

ನೀರಾಟದ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದಸೋಮಯ್ಯ ಚಿಕ್ಕಪಟ,ಗಣ್ಯರಾದ ಶಿವಯೋಗಪ್ಪ ನೇದಲಗಿ,ಭೀಮನಗೌಡ ಪಾಟೀಲ,ಜೀತಪ್ಪ ಕಲ್ಯಾಣಿ,ಶಿವಯೋಗಪ್ಪ ಜೋತಗೊಂಡ,ಸಾಹಿತಿಗಳಾದ ಗೀತಯೋಗಿ,ದಯಾನಂದ ಸ್ವಾಮಿ,ಸೋಮನಾಥ ಶಿವೂರ,ಭೀಮರಾಯ ಪಾತರ ಮತ್ತಿತರಿದ್ದರು.


ನೀರಾಟವು ಹೊರಗಿನ ಗುಡಿಯಲ್ಲಿ ನಡೆಯುವದರಿಂದಶಿವಯೋಗೀಶ್ವರರು ಬಹಿರಂಗ ಬದುಕನ್ನೇತೊರೆದುಅಂತರಂಗ ತೋರಿಸಿದ ಆದ್ಯಾತ್ಮಿಕ ಮಾರ್ಗ ಹಿಡಿದು ದೈವದಲ್ಲಿ ಐಕ್ಯವಾಗಿದ್ದು ಧಾರ್ಮಿಕವಾಗಿ ಉತ್ತುಂಗ ಸಾಧನೆಯಾಗಿದೆ.

ಗೀತಯೋಗಿ ಸಾಹಿತಿಗಳು ಸಾಲೋಟಗಿ