ಬೀದರ :ಸೆ.29:ಜಿಲ್ಲೆಯ ಕೋಟಿ ಪಾಪನಾಶ ಲಿಂಗ ದೇವಸ್ಥಾನವು ಪ್ರಸಾದ ಯೋಜನೆಯಡಿ ಆಯ್ಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಪುರಾತತ್ವ ಅಧಿಕಾರಿಗಳೊಂದಿಗೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿದರು.
ಈಗಾಗಲೆ ರೂ. 5 ಕೋಟಿ ಅನುದಾನ ಮಂಜುರಾಗಿದ್ದು, ಇನ್ನು 15 ರಿಂದ 20 ಕೋಟಿ ಹೆಚ್ಚುವರಿ ಅನುದಾನ ಒದಗಿಬರಲಿದೆ, ಈ ನಿಟ್ಟಿನಲ್ಲಿ ಕೂಡಲೆ ಹೆಚ್ಚಿನ ಅನುದಾನಕ್ಕಾಗಿ ಪ್ಲಾನ್, ಪವರ್ ಪಾಯಿಂಟ್ ಪ್ರೆಸೆಂಟೆಷನ್ ಮಾಡಿ, ವಿಸ್ಕøತವಾದ ಡಿ.ಪಿ.ಆರ್. ಸಿದ್ದಪಡಿಸುವಂತೆ ಸೂಚಿಸಿದರು.
ರೂ. 5 ಕೋಟಿಯಲ್ಲಿ ಕೈಗೋಳ್ಳಲಾಗುವ ಅಭಿವೃದ್ದಿ ಕಾಮಗಾರಿಗಳ ಹೊರತು ಪಡಿಸಿ, ಪಾಪನಾಶದ ಸುತ್ತಮುತ್ತ ಫುಟ್ ಫಾತ್, ಟೈಲ್ಸಗಳಿಂದ ಕೂಡಿರುವ ಪಾರ್ಕಿಂಗ್ ಅಗಲಗೊಳಿಸುವಿಕೆ, 20,000 ಲೀ.ನಿರಿನ್ ಟ್ಯಾಂಕ್, ಹೈ ಟೇಕ್ ಕಿಚನ್, 12 ಜ್ಯೋತಿರ್ಲಿಂಗಳ ಮ್ಯೂಸಿಯಮ್, ದೇವಿ ಮಂದಿರಕ್ಕೆ ಶೇಡ್, ಶೌಚಾಲಯಗಳ ನಿರ್ಮಾಣ, ಪಾಪನಾಶ್ ದೇವಸ್ಥಾನದ ಸಂಪೂರ್ಣ ಜಾಗವು ಒತ್ತುವರಿಯಾಗದಂತೆ ಫೇನ್ಸಿಂಗ್, ಲ್ಯಾಂಡ್ ಸ್ಕೇಪಿಂಗ್ ಮತ್ತು ಬ್ಯೂಟಿಫೀಕೇಷನ್, ಮಾಹಿತಿ ಕೇಂದ್ರ, ಪ್ರಸಾದ ನಿಲಯದ ಅಭಿವೃದ್ದಿ, ನೀರಿನ ಗುಂಡವನ್ನು ಅಭಿವೃದ್ದಿಗೊಳಿಸುವುದು, 20ರ ಬದಲಾಗಿ 40 ಶೌಚಾಲಯ ಸಹಿತ ಕೋಣೆಗಳು ನಿರ್ಮಿಸುವ ಉದ್ದೇಶದಿಂದ ವಾರದೊಳಗೆ ಡಿ.ಪಿ.ಆರ್. ಸಿದ್ದಪಡಿಸಿ ಕಳುಹಿಸಿಕೊಡುವಂತೆ ಸೂಚಿಸಿದರು.
ಕೇಂದ್ರ ಸಚಿವರು ಹಾಗೂ ದೇವಸ್ಥಾನದ ಮುಖ್ಯಸ್ಥರುಗಳು ಸಮ್ಮುಖದಲ್ಲಿ ಎಲ್ಲರ ಒಪ್ಪಿಗೆಯಂತೆ ಈ ಎಲ್ಲಾ ಕೆಲಸಗಳ ಮಾಡಲು ನಿರ್ಧಾರ ಮಾಡಲಾಯಿತು, ಈ ಸಮಯದಲ್ಲಿ ಕೇಂದ್ರ ಸರ್ಕಾರವು ಸಹ ಪಾಪನಾಶ ದೇವಸ್ಥಾನದ ಅಭಿವೃದ್ದಿಗೆ ಅನುದಾನ ನೀಡುತ್ತದೆ, ತಮ್ಮಿಂದ ಯಾವೂದೇ ಕಾರಣಕ್ಕೂ ತಡವಾಗಬಾರದು ಹಾಗೂ ನಾನು ಇದನ್ನು ಸಹಿಸುವುದಿಲ್ಲವೆಂದು ಅಧಿಕಾರಿಗಳಿಗೆ ಖೂಬಾ ತಿಳಿಸಿದರು.
ಈ ಸಂದರ್ಭದಲ್ಲಿ ಪುರಾತತ್ವ ಸಂರಕ್ಷಣಾ ಅಭಿಯಂತರರು ಶ್ರೀಮತಿ. ಪ್ರೇಮಲತಾ ಬಿ.ಎಮ್ ಹಾಗೂ ಅವರ ತಂಡ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶ್ರೀ ಚಂದ್ರಕಾಂತ ಶೇಟಕಾರ, ಶ್ರೀ ರಾಜಶೇಖರ ಜವಳಿ, ಶ್ರೀ ಸೂರ್ಯಕಾಂತ ಶೆಟಕಾರ, ಶ್ರೀ ರಾಜು ಮೇಟಕಾರಿ, ನಾಗಭೂಷಣ ಕಮಠಾಣೆ, ಪ್ರಶಾಂತ ಹೊಳಸಮುದ್ರ ಇತರರು ಉಪಸ್ಥಿತರಿದ್ದರು.