ಪ್ರಸಾದ ಅಬ್ಬಯ್ಯ ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ


ಹುಬ್ಬಳ್ಳಿ,ಸೆ.16- ಬಡವರ ಪರವಾಗಿ ನಿಸ್ವಾರ್ಥ ಸೇವೆ ಮಾಡುವವರು ಮಾತ್ರ ನಿಜವಾದ ನಾಯಕರಾಗಿ ರೂಪುಗೊಳ್ಳಲಿದ್ದು, ಬಡವರ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಇಲ್ಲಿನ ಎಸ್.ಎಂ. ಕೃಷ್ಣಾ ನಗರದಲ್ಲಿ 5 ಕೋ.ರೂ. ಅನುದಾನದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಲ್ತಾಫ್ ಪ್ಲಾಟ್‍ಗೆ ಸಂಪರ್ಕಿಸುವ ಕಿರು ಸೇತುವೆ (ನಾಲಾ ಬ್ರಿಡ್ಜ್) ಹಾಗೂ ಪ್ರಸಾದ ಅಬ್ಬಯ್ಯ ಆಟೋರಿಕ್ಷಾ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಡ ಜನರೇ ಅತಿಹೆಚ್ಚು ವಾಸವಾಗಿದ್ದು, ಬಡವರಿಗೆ ಉತ್ತಮ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಕಲ್ಪಿಸುವ ಉದ್ದೇಶದಿಂದ ಕ್ಷೇತ್ರದ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕ, ಗುಣಮಟ್ಟದ ಸಿಸಿ ರಸ್ತೆ, ಉದ್ಯಾನವನ, ಸಮುದಾಯ ಭವನ, ಆಸ್ಪತ್ರೆಗಳನ್ನು ನಿರ್ಮಿಸುವ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ಪ್ರತಿಷ್ಠಿತ ಬಡಾವಣೆಗಳಿಗೆ ಕಡಿಮೆ ಇಲ್ಲದಂತೆ ಕ್ಷೇತ್ರದ ಸ್ಲಂಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಕೆಲವೇ ವರ್ಷಗಳ ಹಿಂದೆ ಮಳೆಗಾಲದಲ್ಲಿ ಕಾಲಿಡಲೂ ಆಗದಂತಿದ್ದ ಎಸ್.ಎಂ. ಕೃಷ್ಣಾ ನಗರದಲ್ಲೀಗ ರಸ್ತೆಯಲ್ಲೇ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಮಾಡುವಂತೆ ಕಾಲನಿಯ ಕೊನೆವರೆಗೂ ಗುಣಮಟ್ಟದ ಸಿಸಿ ರಸ್ತೆ ನಿರ್ಮಿಸಲಾಗಿದೆ. 1.5. ಕೋ.ರೂ. ವೆಚ್ಚದಲ್ಲಿ ನಿರ್ಮಿಸಿರುವ ನಾಲಾ ತಡೆಗೋಡೆಯಿಂದ ಮಳೆಗಾಲದಲ್ಲಿ ನಾಲಾ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡುವ ಪ್ರವೇಯ ಇದೀಗ ಇಲ್ಲವಾಗಿದೆ ಎಂದ ಹೇಳಿದರು.
ಚಿಕ್ಕ ಸಹಾಯವನ್ನೂ ಕೊನೆವರೆಗೆ ನೆನಪಿಟ್ಟುಕೊಳ್ಳುವ ಬಡವರ ಆರ್ಶೀವಾದದಿಂದಲೇ ಪ್ರಸ್ತುತ ದ್ವಿತೀಯ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದಲ್ಲದೇ ಇತ್ತೀಚಿಗೆ ಕೊರೋನಾ ಸೋಂಕಿನಿಂದ ಗುಣಮುಖನಾಗಿ ಬಂದಿರುವುದರಲ್ಲಿಯೂ ಬಡವರ ಆಶೀರ್ವಾದವೇ ಪ್ರಮುಖ ಕಾರಣವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ರಿಕ್ಷಾ ಚಾಲಕರನ್ನು ವಿಶೇಷವಾಗಿ ಪರಿಗಣಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ವಿಜುನಗೌಡ ಪಾಟೀಲ, ಮುತುವಲ್ಲಿಗಲಾದ ಶಬ್ಬೀರ್ ಅಹ್ಮದ್ ನದಾಫ್, ಸಿರಾಜ್ ಪಲ್ನಾ, ಅಬ್ದುಲ್ ಸತ್ತಾರ, ಮಸೂತಿ ಸಾಬ್, ಮುಸ್ತಾಕ್ ಕಣಕ್ಯಾ, ಬಮ್ಮಾಪುರ ಬ್ಲಾಕ್ ಅಧ್ಯಕ್ಷ ಮೆಹಮೂದ್ ಕೋಳೂರು, ಮುಖಂಡರಾದ ಬಾಬಾಜಾನ್ ಕಾರಡಗಿ, ದಾದಾಪೀರ ಬೇಪಾರಿ, ಖಾಸಿಂ ಸಾಬ್ ಗುಡೇನವರ್, ಜಾಫರ್ ಸಾಬ್ ಸೊಲ್ಲಾಪುರ, ಮಹ್ಮದ್ ಅಲಿ ಧಾರವಾಡ, ರಾಜೇಸಾಬ್ ಮಕಾಂದಾರ್, ಇಮಾಮಸಾಬ್ ಜಮಾದಾರ್, ಮಹಮ್ಮದ್ ಅಲಿ ಅತ್ತಾರ, ಮನ್ಸೂರ್ ಸೋನಾರ್, ತಾಜುದ್ದೀನ್ ಅತ್ತಾರ, ಗೌಸುಮೊದ್ದಿನ್ ಪಾನವಾಲೆ, ಅಬ್ದುಲ್ ಕಹೀಂ ಮುಲ್ಲಾ, ಮಹ್ಮದ್ ಹನೀಫ್ ಲಷ್ಕರ್, ಪಾಂಡುರಂಗ ಟಗರಗುಂಟಿ, ನಿಜಾಮ್ ಮನಿಯಾರ್, ಸಲ್ಮಾ ಮುಲ್ಲಾ, ಶೋಭಾ ಕಮತರ, ಹೊಂಗೆಮ್ಮ ಜಮಖಂಡಿ, ಇತರರು ಇದ್ದರು.
ಇದೇ ಸಂದರ್ಭದಲ್ಲಿ ಆಟೋ ನಿಲ್ದಾಣದ ರಿಕ್ಷಾ ಚಾಲಕರಿಗೆ ಗುರುತಿನ ಚೀಟಿ, ಮಹಿಳೆಯರಿಗೆ ಟೈಲರಿಂಗ್ ಕಲಿಕೆಯ ಪ್ರಮಾಣ ಪತ್ರ ಹಾಗೂ ಕಾರ್ಮಿಕ ಕಾರ್ಡುಗಳನ್ನು ಶಾಸಕರು ವಿತರಿಸಿದರು.