
ಸಿಂಧನೂರು,ಫೆ.೧೯- ಸಂಗೀತ ಚಿಕಿತ್ಸೆಯ ಮೂಲಕ ಔಷಧಿ ಕಂಡು ಹಿಡಿದು, ಜನರ ದೇಹದೊಳಗಿನ ಕಾಯಿಲೆಗಳನ್ನು ತರಂಗಗಳ ಮೂಲಕ ನಿವಾರಣೆ ಮಾಡುವ ರಾಮಬಾಣದಂತ ಔಷಧಿಯನ್ನು ಕಂಡು ಹಿಡಿದಿದ್ದೇನೆ. ಇದರ ಸದುಪಯೋಗವನ್ನು ನಾಡಿನ ಜನ ಪಡೆದುಕೊಳ್ಳುವಂತೆ ಸಂಗೀತ ಮಾಂತ್ರಿಕ ಪ್ರಸನ್ನ ಗುಡಿ ಹೇಳಿದರು.
ನಗರದ ರಂಗಕಲಾವಿದ ವೆಂಕಣ್ಣ ಜೋಶಿ ಯವರ ಮನೆಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ವಿಶ್ವದಲ್ಲೇ ಪ್ರಥಮ ಔಷಧಿಯಾಗಿದೆ ಇದನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದರು.
ಬೇವಿನ ಎಲೆ ಸೇರಿದಂತೆ ಇನ್ನಿತರ ಗಿಡಮೂಲಿಕೆಗಳಿಂದ ತಯಾರಿಸಿದ ಈ ಪುಡಿಯನ್ನು ಬೆಳಗಿನ ಜಾವ ಹಲ್ಲು ಉಜ್ವುವಾಗ ಬಳಸುವ ಪೇಷ್ಷೆನಂತೆ ಈ ಪುಡಿಯನ್ನು ಹಲ್ಲಿಗೆ ಉಜ್ವಿಕೊಂಡರೆ ನಾಲಿಗೆ, ಬಾಯಿ ದುರ್ವಾಸನೆ, ಹಲ್ಲು ಬೇನೆ ವಸುಡು ನೋವು ಸೇರಿದಂತೆ ಇನ್ನಿತರ ಕಾಯಿಲೆಗಳು ಗುಣಮುಖವಾಗುತ್ತವೆ. ಜೊತೆಗೆ ಈ ಪುಡಿ ಎರಡು ದಿನಗಳ ಕಾಲ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.
ನಾನು ಕಛೇರಿಯನ್ನು ಮಾಡಿಲ್ಲ. ಯಾರಿಗೆ ತೊಂದರೆ ಇದೆ ಎಂದು ನನಗೆ ದೂರವಾಣಿ ಮೂಲಕ ತಿಳಿಸಿದರೆ ನಾನು ಖುದ್ದಾಗಿ ಕರೆ ಮಾಡಿದ ವ್ಯಕ್ತಿಯ ಮನೆಗೆ ಹೋಗಿ ಪುಡಿ ನೀಡಿ ಅಲ್ಲೆ ಪರೀಕ್ಷೆ ಮಾಡಿ ವ್ಯಕ್ತಿಗೆ ಗುಣ ಮುಖವಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಬರುತ್ತೇನೆ. ಇನ್ನೂ ಔಷಧಿಗೆ ಬೆಲೆ ನಿಗದಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಿಗದಿ ಮಾಡುತ್ತೇನೆ ಎಂದ ಅವರು ಕೆಲವು ಪತ್ರಕರ್ತರಿಗೆ ಪುಡಿ ನೀಡಿ ಖಾತ್ರಿ ಪಡಿಸಿಕೊಂಡರು.
ಈಗಾಗಲೆ ನಾನು ಹಲವಾರು ಜನರಿಗೆ ಔಷಧಿಯನ್ನು ನೀಡಿದ್ದು, ಜನರಿಂದ ಉತ್ತಮ ಪ್ರತಿ ಕ್ರಿಯೆ ಬಂದಿದೆ ಔಷದಿಯನ್ನು ಕಂಡುಹಿಡಿದ ಮೇಲೆ ಪ್ರಥಮ ಬಾರಿಗೆ ನಗರದಲ್ಲಿ ಸುದ್ದಿ ಗೋಷ್ಠಿಯನ್ನು ಮಾಡುತ್ತಿದ್ದೇನೆ. ಈ ಔಷಧಿ ತರಂಗಳ ಮೂಲಕ ದೇಹದೊಳಗೆ ಹೋಗಿ ಕೆಲಸ ಮಾಡುತ್ತಿದೆ. ಈ ಪೌಡರ ಸಂಗೀತಕ್ಕೆ ನೇರ ನಂಟು ಇದೆ. ಇದು ಪ್ರಥಮ ಸಂಗೀತ ಚಿಕಿತ್ಸೆಯಾಗಿದೆ ಎಂದರು.
ಹಿರಿಯ ರಂಗ ಕಲಾವಿದ ವೆಂಕಣ್ಣ ಜೋಷಿ,ವಿಠಲ್ ಕಂಟೆನವರು, ಗುರುರಾಜ ಪುರೋಹಿತ ವಾಸುದೇವಾಚಾರ್ಯ ಸೇರಿದಂತೆ ಇನ್ನಿತರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.